ಬುಧವಾರ, ಆಗಸ್ಟ್ 5, 2020
23 °C

ರಜನಿ ರಾಜಕೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಜನಿಕಾಂತ್‌ ಅಭಿಮಾನಿಗಳ ಬಹುದಿನಗಳ ಕೋರಿಕೆ ಕೊನೆಗೂ ಈಡೇರಿದಂತಾಗಿದೆ. ತಮಿಳುನಾಡಿನಲ್ಲಿ ಸಿನಿಮಾ ಹಾಗೂ ರಾಜಕೀಯ ಮಿಳಿತಗೊಂಡಿದ್ದರೂ, ರಜನಿ ವ್ಯಕ್ತಿತ್ವಕ್ಕೆ ರಾಜಕೀಯ ಎಷ್ಟರಮಟ್ಟಿಗೆ ಹೊಂದಿಕೊಳ್ಳುವುದೋ ಕಾದು ನೋಡಬೇಕು. ಅಭಿಮಾನಿಗಳ ಉತ್ಸಾಹ, ಹುರುಪು ಮತವಾಗಿ ಯಾವ ಪ್ರಮಾಣದಲ್ಲಿ ಪರಿವರ್ತನೆ ಆಗಲಿದೆ ಎನ್ನುವುದರ ಮೇಲೆ ಅವರ ರಾಜಕೀಯ ಯಶಸ್ಸು ಅವಲಂಬಿಸಿದೆ.

ಅವರ ಆಧ್ಯಾತ್ಮಿಕ ಚಿಂತನೆ, ಸರಳ ಸ್ವಭಾವ... ದ್ರಾವಿಡ ಚಿಂತನೆಯ ಮತದಾರರನ್ನು ಹೇಗೆ ಸೆಳೆಯಲಿದೆ ಎಂಬುದು ಸದ್ಯಕ್ಕೆ ಕೂತೂಹಲಕರ. ದ್ರಾವಿಡ ಶೈಲಿಯ ರಾಜಕೀಯಕ್ಕೆ ಮರುಳಾಗಿ ಅದರಿಂದ ಸ್ವಲ್ಪಮಟ್ಟಿಗೆ ಪಡೆದ ಮತ್ತು ಅದೇ ಕಾರಣಕ್ಕಾಗಿ ಸೊರಗಿದ ಮತದಾರರಲ್ಲಿ ಇವರ ಪ್ರವೇಶ ಹೊಸ ಸಂಚಲನ ಮೂಡಿಸಿರುವುದರಲ್ಲಿ ಸಂದೇಹವಿಲ್ಲ.

–ವಿ.ವಿಜಯೇಂದ್ರ ರಾವ್, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.