ಸುಂಟಿಕೊಪ್ಪ: ಕೇಕೆ, ನಗು ಚಪ್ಪಾಳೆಯ ಸದ್ದಿನ ನಡುವೆ ಮಹಿಳೆಯರು ಓಡುವುದು, ನೆಗೆಯುವುದು, ಅಡುಗೆ ಮಾಡುತ್ತಾ ಸಂಭ್ರಮಿಸುತ್ತಿದ್ದರು... ಇಂತಹ ದೃಶ್ಯ ಕಂಡುಬಂದದ್ದು ಸುಂಟಿಕೊಪ್ಪದ ಜಿಎಂಪಿ ಶಾಲೆಯ ಮೈದಾನದಲ್ಲಿ ಭಾನುವಾರ ಆಯೋಜಿ ಸಿದ್ದ ‘ಮಹಿಳಾ ದಿನ’ ಕಾರ್ಯಕ್ರಮದಲ್ಲಿ.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಮಡಿಕೆ ಹೊಡೆಯುವುದು, ಕುಂಟೆ-ಬಿಲ್ಲೆ, ಕೆರೆ-ದಡ, ನಿಂಬೆ-ಚಮಚ, ಲಗೋರಿ, ಬೆಂಕಿ ರಹಿತ ಅಡುಗೆ ಸ್ಪರ್ದೆ, ನೀರು ತುಂಬುವ, ಬಕೆಟ್‌ಗೆ ಚೆಂಡು ಹಾಕುವ, ಬಲೂನ್ ಹೊಡೆಯುವುದು, ಬಿಸ್ಕೆಟ್ ತಿನ್ನು ವುದು, ಚೆಂಡು ಬಣ್ಣ ಬೇರ್ಪಡಿಸುವುದು ಸೇರಿದಂತೆ ಹಲವು ಸ್ಪರ್ದೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಮಕ್ಕಳ ಸಂತೆ ಮತ್ತು ಜಿಗಿ-ಅಗಿ ಸ್ಪರ್ಧೆ ಜನರನ್ನು ಆಕರ್ಷಿಸಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ‘ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ವಿವಿಧ ಸಮಸ್ಯೆಗಳ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಿ, ಅವುಗಳನ್ನು ಬಗೆಹರಿಸಲು ಯತ್ನಿಸುತ್ತಿರುವ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ಕಾರ್ಯಕ್ರಮದ ಸಹ ಪ್ರಾಯೋಜಕಿ ರಮ್ಯಾ ಮೋಹನ್ ಮಾತನಾಡಿ, ‘ಹಲವಾರು ಕೆಲಸಗಳ ಮಧ್ಯೆ ಮಹಿಳೆಯರನ್ನು ಒಟ್ಟುಗೂಡಿಸಿ ಅವರಲ್ಲಿ ಅಡಗಿರುವ ಕ್ರೀಡಾಪ್ರತಿಭೆಯನ್ನು ಹೊರಹಾಕುವ ನಿಟ್ಟಿನಲ್ಲಿ ಈ ಬಳಗ ಉತ್ತಮ ಕೆಲಸವನ್ನು ನಿರ್ವಹಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬಳಗದ ಡೇನಿಸ್ ಡಿಸೋಜಾ, ರಂಜಿತ್ ಕುಮಾರ್, ಕೆ.ಎಸ್.ಅನಿಲ್ ಕುಮಾರ್, ರಾಜೀವ್, ಟಿ.ಜಿ. ಪ್ರೇಮ್ ಕುಮಾರ್, ಬಿಜಿತ್ ಕುಮಾರ್, ಅಶೋಕ ಶೇಟ್, ರಜಾಕ್,ಶರೀಫ್, ನಿರಂಜನ್,ಶಶಿಕುಮಾರ್, ವಹೀದ್ ಜಾನ್, ನಾಗರತ್ನಾ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.