ಗುರುವಾರ , ಜೂಲೈ 2, 2020
27 °C

‘ಚೆಂಡನ್ನು ಕೆಣಕದಿದ್ದರೆ ಅಪಾಯದಿಂದ ಪಾರು’

ಪಿಟಿಐ Updated:

ಅಕ್ಷರ ಗಾತ್ರ : | |

‘ಚೆಂಡನ್ನು ಕೆಣಕದಿದ್ದರೆ ಅಪಾಯದಿಂದ ಪಾರು’

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಚೆಂಡು ಹೆಚ್ಚು ಪುಟಿಯುವ ಕಾರಣ ಆಡಲು ಆಗದೇ ಇರುವ ಎಸೆತಗಳನ್ನು ಕೆಣಕದೇ ಬಿಡುವುದು ಒಳಿತು ಎಂದು ಭಾರತ ತಂಡದ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಹೇಳಿದರು.

‘ಭಾರತದ ಹೊರಗಿನ್ ಪಿಚ್‌ಗಳಲ್ಲಿ ಆಡಲು ವಿಶೇಷ ಸಾಮರ್ಥ್ಯ ಬೇಕು. ಅಲ್ಲಿ ಚೆಂಡು ಹೆಚ್ಚು ಪುಟಿತ ಕಾಣುತ್ತದೆ. ಅಂಥ ಎಸೆತಗಳನ್ನು ಕೆಣಕದೇ ಬಿಡುವವರು ಅಪಾಯದಿಂದ ಪಾರಾಗಬಲ್ಲರು’ ಎಂದು ಅವರು ಹೇಳಿದರು.

‘ತವರಿನಲ್ಲಿ ಶ್ರೀಲಂಕಾ ವಿರುದ್ಧ ಆಡುತ್ತಿದ್ದಾಗಲೇ ದಕ್ಷಿಣ ಆಫ್ರಿಕಾ ಪ್ರವಾಸದ ಕುರಿತು ಯೋಚಿಸಿದ್ದೆವು. ಇಲ್ಲಿ ಆಡಲು ಅಲ್ಲೇ ಸಿದ್ಧತೆ ಮಾಡಿಕೊಂಡಿದ್ದೆವು. ಆದ್ದರಿಂದ ಇಲ್ಲಿ ತರಾತುರಿಯಲ್ಲಿ ಆಡುತ್ತಿಲ್ಲ. ತಂಡ ಚೆನ್ನಾಗಿ ಸಿದ್ಧಗೊಂಡೇ ಬಂದಿದೆ’ ಎಂದು ಪೂಜಾರ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.