ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಸಂಪೂರ್ಣ ಸ್ತಬ್ಧ: ಜನಜೀವನ ಅಸ್ತವ್ಯಸ್ತ

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ: ಭೀಮಾ–ಕೋರೆಂಗಾವ್‌ ಯುದ್ಧದ 200ನೇ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಹಿಂಸಾಚಾರ ಖಂಡಿಸಿ ದಲಿತ, ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಮಹಾರಾಷ್ಟ್ರ ಬಂದ್‌ಗೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಸಂಪೂರ್ಣ ಸ್ತಬ್ಧಗೊಂಡಿತ್ತು.

ಮಹಾರಾಷ್ಟ್ರದ ಇತರ ಭಾಗಗಳಲ್ಲಿಯೂ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮರಾಠಾವಾಡ ಭಾಗದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಕೆಲವೆಡೆ ಪರಿಸ್ಥಿತಿ ಈಗಲೂ ಬಿಗುವಿನಿಂದ ಕೂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಂದ್‌ ವಾಪಸ್‌: ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಮೊಮ್ಮಗ ಹಾಗೂ ಭಾರಿಪಾ ಬಹುಜನ ಮಹಾಸಂಘದ ಮುಖಂಡ ಪ್ರಕಾಶ್‌ ಅಂಬೇಡ್ಕರ್‌ ಅವರು ಬಂದ್‌ ಕೈಬಿಟ್ಟಿರುವುದಾಗಿ ಸಂಜೆ 4.30ಕ್ಕೆ ಘೋಷಿಸಿದರು.ಅಷ್ಟು ಹೊತ್ತಿಗಾಗಲೇ ಬಂದ್‌ ಬಹುತೇಕ ಯಶಸ್ವಿಯಾಗಿತ್ತು. ರಾಜ್ಯದ ಶೇ 50ರಷ್ಟು ಜನರು ಬಂದ್‌ನಲ್ಲಿ ಭಾಗವಹಿಸಿದ್ದು, ಯಶಸ್ವಿಯಾಗಿದೆ ಎಂದು ತಿಳಿಸಿದರು. ಪ್ರಕಾಶ್‌ ಅಂಬೇಡ್ಕರ್‌ ಈ ಬಂದ್‌ಗೆ ಕರೆ ನೀಡಿದ್ದರು.

ಮುಖ್ಯಾಂಶಗಳು

* 250ಕ್ಕೂ ಹೆಚ್ಚು ದಲಿತ, ಪ್ರಗತಿಪರ ಸಂಘಟನೆಗಳ ಬೆಂಬಲ

* ಮುಂಬೈ ನಗರದಲ್ಲಿ 21 ಸಾವಿರ ಪೊಲೀಸರ ನಿಯೋಜನೆ

* ಮುಂಬೈ ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ 31 ಬೆಸ್ಟ್‌ ಬಸ್‌ ಜಖಂ

* ಎಲ್ಲೆಡೆ ಹಾರಾಡಿದ ನೀಲಿ ಧ್ವಜಗಳು, ಬೈಕ್‌ ರ‍್ಯಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT