ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2000ಕ್ಕೆ ಆಂಡ್ರಾಯ್ಡ್‌ ’ಗೊ’ ಆವೃತ್ತಿಯ ಸ್ಮಾರ್ಟ್‌ಫೋನ್‌: ಗೂಗಲ್‌ ಕನಸಿಗೆ ಮೈಕ್ರೋಮ್ಯಾಕ್ಸ್‌ ಸಹಭಾಗಿತ್ವ

Last Updated 4 ಜನವರಿ 2018, 6:19 IST
ಅಕ್ಷರ ಗಾತ್ರ

ಬೆಂಗಳೂರು: ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಅನ್ನು ಮೈಕ್ರೋಮ್ಯಾಕ್ಸ್‌ ಸಂಸ್ಥೆ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಗೂಗಲ್‌ ಸಹಭಾಗಿತ್ವದಲ್ಲಿ ಮೈಕ್ರೋಮ್ಯಾಕ್ಸ್‌ ಇದೇ ತಿಂಗಳು ಆಂಡ್ರಾಯ್ಡ್‌ ಓರಿಯೊ(ಗೊ ಆವೃತ್ತಿ) ಮೂಲಕ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ ಹೊರತರಲಿದೆ. ₹2000ಕ್ಕೆ ಹೊಸ ಆವೃತ್ತಿಯ ಆಪರೇಟಿಂಗ್‌ ಸಿಸ್ಟಮ್ ಹೊಂದಿರುವ ಫೋನ್‌ ಗ್ರಾಹಕರನ್ನು ತಲುಪಲಿದೆ.

ಇಂಟೆಕ್ಸ್‌, ಲಾವಾ ಹಾಗೂ ಕಾರ್ಬೂನ್‌ ಸೇರಿ ಇತರ ಭಾರತೀಯ ಸ್ಮಾರ್ಟ್‌ಫೋನ್‌ ಉತ್ಪಾದಕ ಸಂಸ್ಥೆಗಳು ಇದೇ ಆವೃತ್ತಿಯನ್ನು ಬಳಸಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತರಲಿವೆ ಎಂದು ಫ್ಯಾಕ್ಟರ್‌ಡೈಲಿ ವರದಿ ಮಾಡಿದೆ.

ಭಾರತದ ಕೋಟ್ಯಾಂತರ ಜನರೊಂದಿಗೆ ಸಂಪರ್ಕ ಹೊಂದುವುದು ಗೂಗಲ್‌ ಗುರಿಯಾಗಿದೆ. ಅತಿ ಕಡಿಮೆ ವೇಗದ ಪ್ರೊಸೆಸರ್‌, ರ‍್ಯಾಮ್‌ ಇರುವ ಫೋನ್‌ಗಳಲ್ಲಿಯೂ ಆಂಡ್ರಾಯ್ಡ್‌ನ ’ಗೊ’ ಆವೃತ್ತಿ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು. ಇದರಿಂದಾಗಿ ಸ್ಮಾರ್ಟ್‌ಫೋನ್‌ ಬೆಲೆ ಇಳಿಯುವಂತೆ ಮಾಡಿ ಹೆಚ್ಚು ಬಳಕೆದಾರರನ್ನು ಸೆಳೆಯುವ ಉದ್ದೇಶ ಹೊಂದಿದೆ.

ಕ್ವಾಲ್‌ಕಾಮ್‌ ಮತ್ತು ಮೀಡಿಯಾಟೆಕ್‌ ಚಿಪ್‌ ಉತ್ಪಾದನಾ ಸಂಸ್ಥೆಗಳು ಆಂಡ್ರಾಯ್ಡ್‌ ಗೊ ಆವೃತ್ತಿಗಾಗಿ ಪ್ರೊಸೆಸರ್‌ ಪೂರೈಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಯುಟ್ಯೂಬ್‌, ಜಿಮೇಲ್‌ನಂತಹ ಇತರೆ ಗೂಗಲ್‌ ಆ್ಯಪ್‌ಗಳು ಮುಂಚಿತವಾಗಿಯೇ ಅಳವಡಿಸಲಾಗಿರುತ್ತದೆ.

ಈ ಸ್ಮಾರ್ಟ್‌ಫೋನ್‌ಗಳು 512ಎಂಬಿ–1ಜಿಬಿ ರ‍್ಯಾಮ್‌, 8ಜಿಬಿ ಮೊಬೈಲ್‌ ಸಂಗ್ರಹ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ. ಜ,26ಕ್ಕೆ ಈ ಹೊಸ ಮೊಬೈಲ್‌ ಫೋನ್‌ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT