ಇಬ್ಬರ ಮೇಲೆ ಹಲ್ಲೆ, ಕೊಲೆ ಯತ್ನ: ಬಜರಂಗದಳದ ಮಹೇಶ್ ಶೆಣೈ ಪ್ರಮುಖ ಆರೋಪಿ

7

ಇಬ್ಬರ ಮೇಲೆ ಹಲ್ಲೆ, ಕೊಲೆ ಯತ್ನ: ಬಜರಂಗದಳದ ಮಹೇಶ್ ಶೆಣೈ ಪ್ರಮುಖ ಆರೋಪಿ

Published:
Updated:
ಇಬ್ಬರ ಮೇಲೆ ಹಲ್ಲೆ, ಕೊಲೆ ಯತ್ನ: ಬಜರಂಗದಳದ ಮಹೇಶ್ ಶೆಣೈ ಪ್ರಮುಖ ಆರೋಪಿ

ಉಡುಪಿ: ಕಾರ್ಕಳದ ಹೊರ ವಲಯದ ಬಂಗ್ಲೆಗುಡ್ಡೆಯಲ್ಲಿ ಗುರುವಾರ ರಾತ್ರಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳ ತಂಡವೊಂದು ಇಬ್ಬರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.

ಕಾರ್ಕಳದ ಶೇಖ್‌ಮೊಹಸಿನ್ ಎಂಬುವರನ್ನು ಅಡ್ಡಗಟ್ಟಿದ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಇದರಿಂದ ಶೇಖ್‌ಮೊಹಸಿನ್‌ ತಲೆಗೆ ಪೆಟ್ಟಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ತಂಡ ಮಹಮ್ಮದ್ ಎನ್ನುವವರ ಮೇ‌ಲೆ ಹಲ್ಲೆ ಮಾಡಿದ್ದು, ಸಲ್ಮಾನ್ ಎಂಬುವವರ ಮೇಲೆ ಹಲ್ಲೆಗೆ ಪ್ರಯತ್ನಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಸ್ಥಳೀಯ ಮುಖಂಡ ಮಹೇಶ್ ಶೆಣೈ, ಗಣೇಶ್ ಪೂಜಾರಿ  ಸೇರಿದಂತೆ ಇತರ ಮೂವರು ಅಪರಿಚಿತರು ವಿರುದ್ಧ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry