ಜನರ ಗಮನ ಸೆಳೆದ ರಾಸುಗಳ ಪ್ರದರ್ಶನ

7

ಜನರ ಗಮನ ಸೆಳೆದ ರಾಸುಗಳ ಪ್ರದರ್ಶನ

Published:
Updated:

ಮಾಲೂರು: ತಾಲ್ಲೂಕಿನ ತೋರ್ನಹಳ್ಳಿ ಗ್ರಾಮದ ಸಪ್ಲಾಂಬ ದೇವಿ ದನಗಳ ಜಾತ್ರೆಯಲ್ಲಿ ರಾಸುಗಳ ಪ್ರದರ್ಶನ ಜನರ ಗಮನ ಸೆಳೆಯುತ್ತಿವೆ. ತಾಲ್ಲೂಕಿನ ಕಸಬ ಹೋಬಳಿಯ ತೋರ್ನಹಳ್ಳಿ ಗ್ರಾಮದ ದಿನ್ನೆಯಲ್ಲಿರುವ ಸಪ್ಲಾಂಬ ದೇವಲಯಕ್ಕೆ ಸೇರಿದ ಹತ್ತಾರು ಎಕರೆ ಪ್ರದೇಶದಲ್ಲಿ ರೈತರು ಚಪ್ಪರ ಪ್ಲಾಸ್ಟೀಕ್ ಪೆಪರ್‌ನಿಂದ ಶೆಡ್‌ ನಿರ್ಮಿಸಿದ್ದರೇ, ಇನ್ನು ಕೆಲವು ರೈತರು ಬಣ್ಣ ಬಣ್ಣದ ಬಟ್ಟೆಗಳಿಂದ ಮಂಟಪಗಳನ್ನು ನಿರ್ಮಿಸಿ ಎತ್ತುಗಳ ಪ್ರದರ್ಶನಗಳನ್ನು ಆರಂಭಿಸಿದ್ದಾರೆ.

ರಾಸುಗಳಿಗೆ ಸೊಳ್ಳೆ ಕಚ್ಚದಂತೆ ರಕ್ಷಿಸಲು ಸೊಳ್ಳೆ ಪರೆದೆಗಳನ್ನು ಅಳವಡಿಸಲಾಗಿದೆ. ಜಾನುವಾರುಗಳಿಗೆವಿಶೇಷ ಆರೈಕೆ ಮಾಡಲಾಗುತ್ತಿದೆ. ನಿಂತುಕೊಳ್ಳುವ ಹಾಗೂ ಮಲಗಲು ನೆಲಕ್ಕೆ ಹುಲ್ಲು ಹಾಸಿ ಸಜ್ಜುಗೊಳಿಸುತ್ತಿದ್ದಾರೆ.

ನಿತ್ಯ ರಾಸುಗಳನ್ನು ತೊಳೆದು ಶುಭ್ರಗೊಳಿಸುವ ರೈತರು ಬೆಳಿಗ್ಗೆ ಹಾಗೂ ಸಂಜೆ ದನಗಳಿಗೆ ಬೂಸಾ, ಕಡಲೆ ಹೊಟ್ಟು, ಗೋಧಿ ಹೊಟ್ಟು ನೀಡುತ್ತಿದ್ದಾರೆ. ಜಾತ್ರೆಯಲ್ಲಿ 10 ದಿನಗಳಿಗೆ ಅಗತ್ಯ ವಿರುವಷ್ಟು ಅಕ್ಕಿ, ಅಡುಗೆ ಅನಿಲ ದಾಸ್ತಾನು ಇರಿಸಿಕೊಂಡಿದ್ದಾರೆ. ಸ್ಥಳದಲ್ಲೇ ರೈತರು ಅಡುಗೆ ತಯಾರಿಸಿಕೊಳ್ಳುತ್ತಿದ್ದಾರೆ.

ಜೋಡಿ ಎತ್ತಿಗೆ ₹ 25 ಸಾವಿರದಿಂದ ₹ 6 ಲಕ್ಷದ ವರೆಗೂ ಮಾರಾಟವಾಗುತ್ತಿದೆ. ಜೊತೆಗೆ ಉತ್ತಮ ರಾಸುಗಳ ಪ್ರದರ್ಶನ ನಡೆಯುತ್ತಿದೆ. ಈಗಾಗಲೇ ತಾಲ್ಲೂಕಿನ ಬಾವನಹಳ್ಳಿ ಗ್ರಾಮದ ರೈತ ಬಿ.ಎಂ.ಮುನಿಯಪ್ಪ ಅವರ ಹಳ್ಳಿಕಾರು ತಳಿಯ ಜೋಡಿ ಎತ್ತುಗಳು ₹ 6.20 ಲಕ್ಷಕ್ಕೆ ಮಾರಾಟವಾಗಿರುವುದು ಇತರೆ ರೈತರ ಉಬ್ಬೇರಿಸುವಂತೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry