ಕಟ್ಟಡದ ಮೇಲಿಂದ ತಳ್ಳಿ ತಾಯಿಯನ್ನೇ ಕೊಲೆ ಮಾಡಿದ ಪ್ರಾಧ್ಯಾಪಕನ ಬಂಧನ

7

ಕಟ್ಟಡದ ಮೇಲಿಂದ ತಳ್ಳಿ ತಾಯಿಯನ್ನೇ ಕೊಲೆ ಮಾಡಿದ ಪ್ರಾಧ್ಯಾಪಕನ ಬಂಧನ

Published:
Updated:
ಕಟ್ಟಡದ ಮೇಲಿಂದ ತಳ್ಳಿ ತಾಯಿಯನ್ನೇ ಕೊಲೆ ಮಾಡಿದ ಪ್ರಾಧ್ಯಾಪಕನ ಬಂಧನ

ರಾಜ್‌ಕೋಟ್‌: ವಸತಿ ಕಟ್ಟಡದ ಮೇಲಿಂದ ತಳ್ಳಿ ತಾಯಿಯನ್ನು ಕೊಲೆ ಮಾಡಿದ ಆರೋಪದ ಮೇಲೆ 36 ವರ್ಷದ ಸಹ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಇಲ್ಲಿನ ಫಾರ್ಮಸಿ ಕಾಲೇಜೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದೀಪ್‌ ನಟ್ವಾನಿ ಬಂಧಿತ ಆರೋಪಿ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿ ಜಯಶ್ರೀಬೆನ್‌(64) ಅವರನ್ನು ಸಾಯಿಸುವ ಸಲುವಾಗಿ, ನಟ್ವಾನಿ ಕಳೆದ ಸೆಪ್ಟೆಂಬರ್‌ 29ರಂದು ತಾನಿರುವ ವಸತಿ ಕಟ್ಟಡದ ಮೇಲಿಂದ ತಳ್ಳಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಳಿಕ ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನನ್ನ ತಾಯಿ ನಿಯಂತ್ರಣ ತಪ್ಪಿ ಕಟ್ಟಡದಿಂದ ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದ. ಆದರೆ, ಅಪರಿಚಿತ ದೂರಿನ ಆಧಾರದಲ್ಲಿ ತನಿಖೆ ನಡೆಸಿದ್ದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

‘ದೂರು ಬಂದ ನಂತರ, ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿದೆವು. ಅದರಲ್ಲಿ ಜಯಶ್ರೀಬೆನ್‌ ಅವರು ಕೆಳಗೆ ಬೀಳುವ ವೇಳೆ ಆರೋಪಿ ನಟ್ವಾನಿ ಜತೆಯಲ್ಲಿದ್ದುದ್ದು ಸ್ಪಷ್ಟವಾಗಿ ದಾಖಲಾಗಿತ್ತು’ ಎಂದು ಡಿಸಿಪಿ ಕರಂಜ್ರಾಜ್‌ ವಘೇಲಾ ಹೇಳಿದ್ದಾರೆ.

ನಟ್ವಾನಿ ತನ್ನ ಮೇಲಿನ ಕೊಲೆ ಆರೋಪವನ್ನು ಅಲ್ಲಗಳೆದಿದ್ದ ಆದರೆ ವಿಚಾರಣೆ ಮುಂದುವರಿದಂತೆ ತಪ್ಪೊಪ್ಪಿಕೊಂಡಿದ್ದಾನೆ ಎಂದೂ ಅವರು ಹೇಳಿದರು.

ಪ್ರಕರಣದ ತನಿಖೆ ವೇಳೆ ಬಳಲಿದ್ದ ನಟ್ವಾನಿಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಹೊರಬಂದ ಬಳಿಕ ನಿಯಮಾನುಸಾರವಾಗಿ ಬಂಧಿಸಲಾಗುತ್ತದೆ. ನಟ್ವಾನಿ ವಿರುದ್ಧ ಐಪಿಸಿ ಸೆಕ್ಷನ್‌ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry