ಕಬಡ್ಡಿ: ಸೆಮಿಯಲ್ಲಿ ಎಡವಿದ ಕರ್ನಾಟಕ

7

ಕಬಡ್ಡಿ: ಸೆಮಿಯಲ್ಲಿ ಎಡವಿದ ಕರ್ನಾಟಕ

Published:
Updated:
ಕಬಡ್ಡಿ: ಸೆಮಿಯಲ್ಲಿ ಎಡವಿದ ಕರ್ನಾಟಕ

ಹೈದರಾಬಾದ್‌: ರೋಚಕ ಘಟ್ಟದಲ್ಲಿ ಎಡವಟ್ಟು ಮಾಡಿಕೊಂಡ ಕರ್ನಾಟಕದ ಪುರುಷರ ತಂಡದವರು ರಾಷ್ಟ್ರೀಯ ಸೀನಿಯರ್‌ ಕಬಡ್ಡಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಶುಕ್ರ ವಾರ ನಡೆದ ಹೋರಾಟದಲ್ಲಿ ಶಬ್ಬೀರ್‌ ಬಳಗ 34–35 ಪಾಯಿಂಟ್ಸ್‌ ನಿಂದ ಮಹಾರಾಷ್ಟ್ರ ತಂಡಕ್ಕೆ ಶರಣಾಯಿತು.

ಮೊದಲರ್ಧದ ವೇಳೆಗೆ 11–22 ರಿಂದ ಹಿಂದಿದ್ದ ರಾಜ್ಯ ತಂಡ ದವರು ದ್ವಿತೀಯಾರ್ಧದಲ್ಲಿ ಅಮೋಘ ಆಟ ಆಡಿದ್ದರು. ಪ್ರಪಂಜನ್‌ ಮತ್ತು ಶಬ್ಬೀರ್‌ ರೈಡಿಂಗ್‌ನಲ್ಲಿ ಮಿಂಚಿದರೆ, ಜೀವಕುಮಾರ್‌ ಮತ್ತು ಜವಾಹರ ವಿವೇಕ್‌ ರಕ್ಷಣಾ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಿದ್ದರು.

ಕೊನೆಯ 30 ಸೆಕೆಂಡುಗಳ ಆಟ ಬಾಕಿ ಇದ್ದಾಗ ಎರಡೂ ತಂಡಗಳು 32–32ರಿಂದ ಸಮಬಲ ಸಾಧಿಸಿದ್ದವು. ‘ಮಾಡು ಇಲ್ಲವೆ ಮಡಿ ರೈಡ್‌’ನಲ್ಲಿ ರಿಶಾಂಕ್‌ ದೇವಾಡಿಗ ಪಾಯಿಂಟ್ಸ್‌ ಹೆಕ್ಕಿ ಮಹಾರಾಷ್ಟ್ರ ತಂಡದ ಸಂಭ್ರಮಕ್ಕೆ ಕಾರಣರಾದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಸರ್ವಿಸಸ್‌ 31–29ರಿಂದ ಹರಿಯಾಣ ತಂಡವನ್ನು ಸೋಲಿಸಿತು.

ಮಹಾರಾಷ್ಟ್ರಕ್ಕೆ ಪ್ರಶಸ್ತಿ: ಮಹಾ ರಾಷ್ಟ್ರ ತಂಡ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಎತ್ತಿಹಿಡಿಯಿತು. ಫೈನಲ್‌ ಹಣಾಹಣಿಯಲ್ಲಿ ಈ ತಂಡ 36–20ರಲ್ಲಿ ಸರ್ವಿಸಸ್‌ ಸವಾಲು ಮೀರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry