ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಫೈನಲ್‌ಗೆ ಸಸ್ನೋವಿಕ್

Last Updated 5 ಜನವರಿ 2018, 20:01 IST
ಅಕ್ಷರ ಗಾತ್ರ

ಬ್ರಿಸ್ಬೇನ್: ಬೆಲಾರಸ್‌ನ ಅಲೆಕ್ಸಾಂಡ್ರ ಸಸ್ನೋವಿಕ್ ಅವರು ಬ್ರಿಸ್ಬೇನ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯ ಫೈನಲ್‌ ಪ್ರವೇಶಿಸಿದರು. ಈ ಟೂರ್ನಿಯ ಇತಿಹಾಸದಲ್ಲಿ ಅರ್ಹತಾ ಸುತ್ತಿನ ಮೂಲಕ ಮುಖ್ಯ ಸುತ್ತು ಪ್ರವೇಶಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ಅವರ ಪಾಲಾಯಿತು.

ಶುಕ್ರವಾರ ನಡೆದ ಮಹಿಳೆಯರ ಸೆಮಿಫೈನಲ್‌ನಲ್ಲಿ ಅವರು ಏಳನೇ ಶ್ರೇಯಾಂಕಿತ ಆಟಗಾರ್ತಿ ಲಾಟ್ವಿಯಾದ ಅನಸ್ತೇಸಿಜ ಸೆವಸ್ತೋವ ಅವರನ್ನು 7–6 (7/3), 6–4ರಿಂದ ಮಣಿಸಿದರು.

ಅರ್ಹತಾ ಸುತ್ತಿನಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ಅವರು ಮುಖ್ಯ ಸುತ್ತಿನ ನಾಲ್ಕು ಪಂದ್ಯಗಳಲ್ಲಿ ಆಡಿದ್ದರು. ಶುಕ್ರವಾರದ ಪಂದ್ಯದಲ್ಲಿ 93 ನಿಮಿಷ ಆಡಿ ಎದುರಾಳಿಯ ಪ್ರಬಲ ಸವಾಲನ್ನು ಮೆಟ್ಟಿ ನಿಂತರು. ಮುಖ್ಯ ಸುತ್ತಿನ ನಾಲ್ಕೂ ಪಂದ್ಯಗಳಲ್ಲಿ ಮೊದಲ ಸೆಟ್ ಸೋತಿದ್ದ ಅವರು ನಂತರ ಚೇತರಿಕೆ ಕಂಡಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಆರಂಭದಿಂದಲೇ ಆಧಿಪತ್ಯ ಸಾಧಿಸಿದರು.

ಸ್ವಿಟೊಲಿನಾ ಫೈನಲ್‌ಗೆ
ಮಹಿಳಾ ವಿಭಾಗದ ಮೊತ್ತೊಂದು ಸೆಮಿಫೈನಲ್‌ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ಗೆಲುವು ಸಾಧಿಸಿದರು. ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಅವರನ್ನು ಎಲಿನಾ 7–5, 7–5 ನೇರ ಸೆಟ್‌ಗಳಿಂದ ಮಣಿಸಿದರು.

ಫೈನಲ್ ಪಂದ್ಯ ಶನಿವಾರ ನಡೆಯಲಿದೆ.

ಸೆಮಿಫೈನಲ್‌ಗೆ ಹ್ಯಾರಿಸನ್‌, ಮಿನೌರ್‌
ಪುರುಷರ ವಿಭಾಗದಲ್ಲಿ ಆಸ್ಟ್ರೇಲಿ ಯಾದ ಅಲೆಕ್ಸ್ ಡಿ ಮಿನೌರ್‌, ನಿಕ್ ಕಿರ್ಗಿಯೋಸ್‌, ಅಮೆರಿಕದ ರಯಾನ್ ಹ್ಯಾರಿಸನ್ ಮತ್ತು ಬೆಲಾರಸ್‌ನ ಗ್ರಿಗರ್ ಡಿಮಿಟ್ರೊವ್‌ ಸೆಮಿಫೈನಲ್‌ ಪ್ರವೇಶಿಸಿದರು.

ಕ್ವಾರ್ಟರ್ ಫೈನಲ್‌ನಲ್ಲಿ ಅಲೆಕ್ಸ್‌ ಅಮೆರಿಕದ ಮೈಕೆಲ್ ಮೋಹ್‌ ಅವ ರನ್ನು 6–4, 6–0ಯಿಂದ, ಕಿರ್ಗಿ ಯೊಸ್‌ ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗೊ ಪೊಲೊವ್ ಅವರನ್ನು 1–6, 6–3, 6–4ರಿಂದ, ಹ್ಯಾರಿಸನ್‌ ಉಜ್ಬೆಕಿಸ್ತಾನದ ಡೆನಿಸ್ ಇಸ್ತೊಮಿನ್ ಅವರನ್ನು 7–6(8/6), 4–2 (ನಿವೃತ್ತಿ)ರಿಂದ ಮತ್ತು ಡಿಮಿಟ್ರೊವ್‌ ಬ್ರಿಟನ್‌ನ ಕೈಲ್‌ ಎಡ್ಮಂಡ್ ಅವರನ್ನು 6–3, 6–7 (3/7), 6–4ರಿಂದ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT