ಬುಧವಾರ, ಆಗಸ್ಟ್ 5, 2020
21 °C

ಹಾಪ್‌ಮನ್‌ ಕಪ್‌ ಟೆನಿಸ್ ಸ್ವಿಟ್ಜರ್‌ಲೆಂಡ್‌ಗೆ ಪ್ರಶಸ್ತಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪರ್ತ್‌: ರೋಜರ್ ಫೆಡರರ್‌ ಹಾಗೂ ಬೆಲಿಂಡಾ ಬೆಂಟಿಕ್ ಅವರ ಜಯದ ನೆರವಿ ನಿಂದ ಹಾಪ್‌ಮನ್ ಕಪ್‌ ಟೆನಿಸ್ ಟೂರ್ನಿಯಲ್ಲಿ ಶನಿವಾರ ಸ್ವಿಟ್ಜರ್‌ ಲೆಂಡ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

ಮಿಶ್ರ ತಂಡ ವಿಭಾಗದ ಟೂರ್ನಿಯಲ್ಲಿ ಈ ಜೋಡಿ ಕ್ರಮವಾಗಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರವ್ ಮತ್ತು ಏಂಜಲಿಕ್ ಕೆರ್ಬರ್ ಅವರನ್ನು ಮಣಿಸಿದೆ.

ಸ್ವಿಟ್ಜರ್‌ಲೆಂಡ್‌ ತಂಡ 2–1ರಲ್ಲಿ ಜರ್ಮನಿ ವಿರುದ್ಧ ಗೆದ್ದಿದೆ. ಫೆಡರರ್‌ 6–7, 6–0, 6–2ರಲ್ಲಿ ಅಲೆಕ್ಸಾಂಡರ್‌ ಜ್ವೆರವ್‌ಗೆ ಸೋಲುಣಿಸುವ ಮೂಲಕ ಜಯದ ರೂವಾರಿ ಎನಿಸಿದರು.

ಫೆಡರರ್‌ ಎರಡನೇ ಬಾರಿ ಹಾಪ್‌ಮನ್‌ ಕಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 2001ರಲ್ಲಿ ಅವರು ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಆಡಿದ್ದರು. ಸ್ವಿಟ್ಜರ್‌ಲೆಂಡ್ ಮೂರನೇ ಬಾರಿ ಇಲ್ಲಿ ಪ್ರಶಸ್ತಿ ಜಯಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.