ಶನಿವಾರ, ಜೂಲೈ 11, 2020
28 °C

ಸೌದಿ: 11 ರಾಜಕುಮಾರರ ಬಂಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದುಬೈ: ದುಬೈ ಅರಸರಿಗೆ ಸೇರಿದ ಅರಮನೆಯಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ 11 ರಾಜಕುಮಾರರನ್ನು ಬಂಧಿಸಲಾಗಿದೆ ಎಂದು ಸೌದಿ ನ್ಯೂಸ್‌ ವೆಬ್‌ಸೈಟ್‌ ವರದಿ ಮಾಡಿದೆ.

ಅನಾಮಿಕ ಅಧಿಕಾರಿಯೊಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅರಸರ ಕುಟುಂಬದವರ ರಕ್ಷಣೆಗಿರುವ  ರಾಷ್ಟ್ರೀಯ ಭದ್ರತಾ ವಿಭಾಗವು ಪ್ರತಿಭಟನೆಯಲ್ಲಿ ನಿರತರಾಗಿದ್ದ ರಾಜಕುಮಾರರನ್ನು ಬಂಧಿಸಲು ಆದೇಶ ನೀಡಿತ್ತು ಎಂದು ವರದಿ ತಿಳಿಸಿದೆ.

ಬಂಧಿತರನ್ನು ರಾಜಧಾನಿ ರಿಯಾದ್‌ನ ದಕ್ಷಿಣ ಭಾಗದಲ್ಲಿರುವ ಗರಿಷ್ಠ ಭದ್ರತಾ ವ್ಯವಸ್ಥೆ ಇರುವ, ಸೌದಿ ಸುಪ್ತಚರ ಸೇವೆಗಳು ನಡೆಸುವ ಜೈಲಿನಲ್ಲಿ ಇರಿಸಲಾಗಿದೆ. ಇದೇ ಜೈಲಿನಲ್ಲಿ ಅಪರಾಧಿಗಳು, ಉಗ್ರರು, ಅಲ್‌–ಕೈದಾ ಭಯೋತ್ಪಾದಕರನ್ನು ಕೂಡಾ ಇರಿಸಲಾಗಿದೆ ಎಂದು ವರದಿಯಾಗಿದೆ.

ಸೋದರ ಸಂಬಂಧಿಯೊಬ್ಬರಿಗೆ ಪರಿಹಾರಧನ ನೀಡಬೇಕೆಂಬ ಬೇಡಿಕೆ ಮತ್ತು ಸಂಬಂಧಿಗಳ ನೀರು ಹಾಗೂ ವಿದ್ಯುತ್‌ ಬಿಲ್ ಪಾವತಿಯನ್ನು ಸ್ಥಗಿತಗೊಳಿಸಿರುವ ರಾಜನ ಕ್ರಮದ ವಿರುದ್ಧ ಈ ಪ್ರತಿಭಟನೆ ನಡೆದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.