ಗುರುವಾರ , ಜೂಲೈ 9, 2020
26 °C

ಹಿಂಸಾಚಾರಕ್ಕೆ ಖಂಡನೆ; ಮೌನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಭೀಮಾ ಕೋರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ದಲಿತರ ಮೇಲೆ ಈಚೆಗೆ ನಡೆದ ಹಿಂಸಾಚಾರ ಖಂಡಿಸಿ, ಜಿಲ್ಲೆಯ ದಲಿತಪರ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಿಂದ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತದ ಮೂಲಕ ಮೌನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ತಲುಪಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

‘ಪೇಶ್ವೆಗಳು ದಲಿತರನ್ನು ಕೀಳಾಗಿ ಕಾಣುತ್ತಿದ್ದನ್ನು ಖಂಡಿಸಿ, ಬ್ರಿಟಿಷ್‌ ಸೈನ್ಯದಲ್ಲಿದ್ದ 500 ಮಹರ್‌ ಸೈನಿಕರು ಯುದ್ಧ ಸಾರಿ ಬೃಹತ್ ಸೈನ್ಯವನ್ನು ಸೋಲಿಸಿ, ಶೌರ್ಯ ಮೆರೆದ ದಿನವನ್ನು, ಯುದ್ಧವನ್ನು ದಲಿತರು ಸ್ವಾಭಿಮಾನದ ಸಂಕೇತವಾಗಿ ಪರಿಗಣಿಸಿದ್ದಾರೆ.

ಈ ನಿಗದಿತ ದಿನ ಕೋರೆಗಾಂವ್‌ಗೆ ಅಪಾರ ಸಂಖ್ಯೆಯಲ್ಲಿ ತೆರಳಿ ವಿಜಯಸ್ತಂಭದ ಎದುರು ಮಹರ್‌ ಸೈನಿಕರಿಗೆ ಗೌರವ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಈ ವರ್ಷ ಉದ್ದೇಶಪೂರ್ವಕವಾಗಿ ಬಲಪಂಥೀಯ ಸಂಘಟನೆಗಳು ದಲಿತರ ಸ್ವಾಭಿಮಾನಿ ಪ್ರಜ್ಞೆ ಕೆಣಕಿದ್ದಾರೆ.

ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಿ. ಪ್ರಚೋದನೆ ನೀಡಿದ ಸಂಘಟನೆಗಳನ್ನು ನಿಷೇಧಿಸಿ’ ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ನೀಡಿದರು.

ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಕೆ.ಬಸಣ್ಣ ಚಲವಾದಿ, ಸಂಗಪ್ಪ ಚಲವಾದಿ, ಬಿ.ಎಸ್.ಬ್ಯಾಳಿ, ದಶವಂತ ಗುನ್ನಾಪುರ, ಕೆ.ಎಂ.ಶಿವಶರಣ, ದೇವೇಂದ್ರ ಬಡಿಗೇರ, ಸಿ.ಆರ್.ತೊರವಿ, ಎಸ್.ಎಲ್.ಇಂಗಳೇಶ್ವರ, ಎಚ್.ವೈ.ಲಂಬು, ಅನಿಲ ಹೊಸಮನಿ, ರಮೇಶ ಆಸಂಗಿ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ಲ, ಸುರೇಶ ಮಣ್ಣೂರ, ಕುಮಾರ ಶಹಾಪುರ, ಪರಶುರಾಮ ಲಂಬು, ಜಿತೇಂದ್ರ ಕಾಂಬಳೆ, ರಾಜಶೇಖರ ಕುದರಿ, ಸುರೇಶ ಭಾವಿಮನಿ, ಯಮನಪ್ಪ ಸಿದರೆಡ್ಡಿ, ಸಿದ್ದು ರಾಯಣ್ಣವರ, ಸಂತೋಷ ಶಹಾಪುರ, ವೆಂಕಟೇಶ ವಗ್ಯಾನವರ್, ವಿಕಾಸ ಹೊಸಮನಿ, ಎಸ್.ಪಿ. ಯಂಭತ್ನಾಳ, ವಿಲಾಸ ವ್ಯಾಸ, ರಾಹುಲ್ ಮಾನಕರ, ಬಸಲಿಂಗಪ್ಪ ಬಿದರಕುಂದಿ, ಜಗದೀಶ ಪ್ರಭಾಕರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.