ದೀಪಕ್ ರಾವ್, ಬಶೀರ್ ಮನೆಗೆ ಭೇಟಿ; ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಸಿಎಂ

7

ದೀಪಕ್ ರಾವ್, ಬಶೀರ್ ಮನೆಗೆ ಭೇಟಿ; ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಸಿಎಂ

Published:
Updated:
ದೀಪಕ್ ರಾವ್, ಬಶೀರ್ ಮನೆಗೆ ಭೇಟಿ; ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಸಿಎಂ

ಮಂಗಳೂರು: ಇತ್ತೀಚಿಗೆ ಕೊಲೆಯಾದ ಕಾಟಿಪಳ್ಳದ ದೀಪಕ್ ರಾವ್ ಹಾಗೂ ಹಲ್ಲೆಯಿಂದ ಸಾವಿಗೀಡಾಗಿರುವ ಅಹಮ್ಮದ್‌ ಬಶೀರ್ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ಮೃತನ ತಾಯಿ, ತಮ್ಮ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ದೀಪಕ್ ತಮ್ಮ ಸತೀಶ್ ರಾವ್ ಅವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಸಿಎಂ, ಈ ಸಂಬಂಧ ಪ್ರಕ್ರಿಯೆ ಆರಂಭಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಸೂಚಿಸಿದರು. ಕೊಲೆಯಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದರು.

ದೀಪಕ್ ಕೊಲೆ ಬಳಿಕ ನಡೆದ ಹಲ್ಲೆಯಿಂದ ಸಾವಿಗೀಡಾಗಿರುವ ಅಹಮ್ಮದ್ ಬಶೀರ್ ಮನೆಗೂ ಮುಖ್ಯಮಂತ್ರಿ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಬಿ.ಎ.ಮೊಯಿದ್ದೀನ್ ಬಾವ ಜೊತೆಗಿದ್ದಾರೆ.

ಅಹಮ್ಮದ್ ಬಶೀರ್ ಮನೆಗೆ ಮುಖ್ಯಮಂತ್ರಿ ಭೇಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry