ಗುರುವಾರ , ಜೂಲೈ 9, 2020
26 °C

ಬೇಕಿಲ್ಲ ಪ್ರತ್ಯೇಕ ಧರ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬ್ರಾಹ್ಮಣ ಧರ್ಮವಾಗಲಿ’ ಎಂಬ ಡಾ. ದೇವಿದಾಸ ಪ್ರಭು ಅವರ ಅಭಿಪ್ರಾಯಕ್ಕೆ (ವಾ.ವಾ., ಜ.3) ನನ್ನ ಸಹಮತವಿಲ್ಲ. ಏಕೆಂದರೆ, ಬ್ರಾಹ್ಮಣ ವರ್ಣದ ಕರ್ತವ್ಯಗಳ ಬಗೆಗೆ ಹೇಗೆ ವೇದಗಳಲ್ಲಿ ಹೇಳಲಾಗಿದೆಯೋ ಹಾಗೆಯೇ ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಣಗಳ ಕರ್ತವ್ಯಗಳ ಬಗೆಗೂ ಅದೇ ವೇದಗಳಲ್ಲಿ ಹೇಳಲಾಗಿದೆ. ಆದಕಾರಣ ಇತರ ಮೂರೂ ವರ್ಣಗಳ ಜನರೂ ವೈದಿಕ ಧರ್ಮಾನುಯಾಯಿಗಳೇ ಆಗಿರುತ್ತಾರೆ. ಪೌರೋಹಿತ್ಯ, ಪೂಜೆ ಇತ್ಯಾದಿಗಳನ್ನು ವೈದಿಕ ವೃತ್ತಿ ಅಂತ ಪರಿಗಣಿಸಿದರೂ ಉಳಿದ ಮೂರೂ ವರ್ಣಗಳು (ಆಯ್ಕೆಗಳು) ಸಹ ವೇದಗಳಲ್ಲಿ ಉಲ್ಲೇಖವಾಗಿರುವ ವೈದಿಕ ವೃತ್ತಿಗಳೇ ಆಗುತ್ತವೆ.

ಈ ಕಾರಣಗಳಿಂದ, ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಯಾರೂ ಕೈಹಾಕಬಾರದು ಎಂದು ಕೇಳಿಕೊಳ್ಳುತ್ತೇನೆ. ಸಾಧ್ಯವಾದರೆ ವೀರಶೈವ ಲಿಂಗಾಯತರನ್ನೋ, ಜೈನ, ಬೌದ್ಧರನ್ನೋ ಹಿಂದೂ ಧರ್ಮದೊಳಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡೋಣ. ಯಾವಾಗಲೂ ಒಡಕಿಗಿಂತ ಒಗ್ಗಟ್ಟಿನಲ್ಲಿ ಬಲ ಹೆಚ್ಚು. ಆದಕಾರಣ ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡುವ ಅಗತ್ಯವಿಲ್ಲ.

–ಜಿ.ವಿ. ಗಣೇಶಯ್ಯ, ಮೈಸೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.