ಡೆಲ್ಲಿ ಸುಲ್ತಾನ್ಸ್‌ಗೆ ಮೊದಲ ಅಗ್ನಿಪರೀಕ್ಷೆ

7

ಡೆಲ್ಲಿ ಸುಲ್ತಾನ್ಸ್‌ಗೆ ಮೊದಲ ಅಗ್ನಿಪರೀಕ್ಷೆ

Published:
Updated:

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸುಶೀಲ್ ಕುಮಾರ್‌ ಅವರನ್ನು ಒಳಗೊಂಡ ಡೆಲ್ಲಿ ಸುಲ್ತಾನ್ಸ್ ತಂಡ ಮಂಗಳವಾರದಿಂದ ಆರಂಭವಾಗಲಿರುವ ಪ್ರೊ ಕುಸ್ತಿ ಲೀಗ್‌ನಲ್ಲಿ ಮೊದಲ ಅಗ್ನಿಪರೀಕ್ಷೆ ಎದುರಿಸಲಿದೆ.

ಮೂರನೇ ಆವೃತ್ತಿಯ ಮೊದಲ ಪಂದ್ಯಕ್ಕೆ ಇಲ್ಲಿನ ಸಿರಿ ಫೋರ್ಟ್‌ ಕ್ರೀಡಾ ಸಂಕೀರ್ಣ ಸಜ್ಜುಗೊಂಡಿದೆ. ಡೆಲ್ಲಿ ಸುಲ್ತಾನ್ಸ್ ತಂಡ ಮುಂಬೈ ಮಹಾರತಿ ಎದುರು ಸೆಣಸಲಿದೆ.

ಹಿಂದಿನ ಆವೃತ್ತಿಯಲ್ಲಿ ಐದನೇ ಸ್ಥಾನ ಪಡೆದಿದ್ದ ಡೆಲ್ಲಿ ತಂಡ ಈ ಬಾರಿ ಸುಶೀಲ್ ಅವರ ಸೇರ್ಪಡೆಯಿಂದಾಗಿ ಬಲ ಹೆಚ್ಚಿಸಿಕೊಂಡಿದೆ. ಸುಶೀಲ್ ಅಮೋಘ ಫಾರ್ಮ್‌ನಲ್ಲಿದ್ದು 74ಕೆ.ಜಿ ವಿಭಾಗದಲ್ಲಿ ಡೆಲ್ಲಿ ತಂಡದ ಭರವಸೆ ಎನಿಸಿದ್ದಾರೆ.

92ಕೆ.ಜಿ ವಿಭಾಗದ ಸ್ಪರ್ಧಿ ಅಲ್ವರ್ನೊ ಅಸ್ಲನ್‌ ಅವರ ಮೇಲೆ ಹೆಚ್ಚು ವಿಶ್ವಾಸವಿದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಅಜರ್‌ಬೈಜಾನ್‌ನ ಹಜಿಲ್‌ ಅಲಿಯವೆವ್‌ ಕೂಡ ಡೆಲ್ಲಿ ತಂಡದ ಶಕ್ತಿ ಹೆಚ್ಚಿಸಲಿದ್ದಾರೆ. ಸಂಗೀತಾ ಪೊಗಟ್ 57ಕೆ.ಜಿ ವಿಭಾಗದಲ್ಲಿ ಪಂದ್ಯ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry