ಮಂಗಳವಾರ, ಮೇ 26, 2020
27 °C

ಗ್ರಾಮೀಣಾಭಿವೃದ್ಧಿಗೆ ₹14. 34 ಲಕ್ಷ ಕೋಟಿ ಅನುದಾನ

ಪಿಟಿಐ Updated:

ಅಕ್ಷರ ಗಾತ್ರ : | |

ಗ್ರಾಮೀಣಾಭಿವೃದ್ಧಿಗೆ ₹14. 34 ಲಕ್ಷ ಕೋಟಿ ಅನುದಾನ

ನವದೆಹಲಿ (ಪಿಟಿಐ): 2018–19ರಲ್ಲಿ ಗ್ರಾಮೀಣ ಭಾಗದ ಮೂಲಸೌಕರ್ಯ ಕ್ಷೇತ್ರಕ್ಕೆ ₹14.34 ಲಕ್ಷ ಕೋಟಿ ಮೊತ್ತವನ್ನು ಖರ್ಚು ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ 321 ಕೋಟಿ ಮಾನವ ದಿನದ ಉದ್ಯೋಗಸೃಷ್ಟಿ ಮಾಡುವುದಾಗಿ ಹಣಕಾಸು ಸಚಿವ ಜೇಟ್ಲಿ ತಿಳಿಸಿದ್ದಾರೆ.

‘ಉದ್ಯೋಗ ಸೃಷ್ಟಿ ಅಲ್ಲದೇ, ಈ ಹೂಡಿಕೆಯಿಂದ 3.71 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ, 51 ಲಕ್ಷ ಹೊಸ ಮನೆ, 1.88 ಕೋಟಿ ಶೌಚಾಲಯ, 1.75 ಕೋಟಿ ಮನೆಗಳಿಗೆ ಹೊಸತಾಗಿ ವಿದ್ಯುತ್‌ ಸಂಪರ್ಕ ಮಾಡಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಯೋಗ ಕಾರ್ಯಕ್ರಮ (ಎನ್‌ಆರ್‌ಎಲ್‌ಎಂ) ನೀಡಿರುವ ಅನುದಾನವನ್ನು ₹4,500 ಕೋಟಿ ಗಳಿಂದ ₹5,750 ಕೋಟಿಗಳಿಗೆ ಏರಿಕೆ ಮಾಡಲಾಗಿದೆ.

2016–17ರಲ್ಲಿ ಮಹಿಳಾ ಸ್ವಸಹಾಯ ಗುಂಪು (ಎಸ್‌ಎಚ್‌ಜಿಎಸ್‌)ಗಳಿಗೆ ₹ 42,500 ಕೋಟಿ ಸಾಲ ವಿತರಿಸಲಾಗಿತ್ತು. ಮುಂದಿನ ವರ್ಷದ ಮಾರ್ಚ್‌ ಒಳಗೆ ಈ ಮೊತ್ತವನ್ನು ₹75 ಸಾವಿರ ಕೋಟಿಗೆ ಏರಿಕೆಯಾಗಲಿದೆ’ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನ ಪ್ರಸ್ತಾವನೆಗಳಲ್ಲಿ ಸೂಚಿಸಿರುವಂತೆ, ಗ್ರಾಮೀಣ ಭಾಗಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಜೀವನಾಧಾರವನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕೃಷಿ ಹಾಗೂ ಕೃಷಿಗೆ ಸಂಬಂಧಿತ ಚಟುವಟಿಕೆ, ಗ್ರಾಮೀಣ ಮೂಲಸೌಕರ್ಯ ಕ್ಷೇತ್ರ’ಕ್ಕೆ ಸರ್ಕಾರವು ಹೆಚ್ಚಿನ ಅನುದಾನ ಒದಗಿಸಿದೆ’ ಎಂದು ಅವರು ತಿಳಿಸಿದರು.

[related]

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.