ಶನಿವಾರ, ಜೂನ್ 6, 2020
27 °C

ನ್ಯಾ.ಸದಾಶಿವ ವರದಿ ಶಿಫಾರಸು: ರಾಹುಲ್ ಗಾಂಧಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾ.ಸದಾಶಿವ ವರದಿ ಶಿಫಾರಸು: ರಾಹುಲ್ ಗಾಂಧಿ ಭರವಸೆ

ರಾಯಚೂರು: ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ರಾಜ್ಯ ಸರ್ಕಾರದಿಂದ ಶಿಫಾರಸು ಕಳುಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭರವಸೆ ನೀಡಿದರು ಎಂದು ವಿವಿಧ ದಲಿತ ಸಂಘಟನೆಗಳ ಮುಖಂಡರು ತಿಳಿಸಿದರು.

ಜಿಲ್ಲೆಯ ಸಿಂಧನೂರು ನಗರದಲ್ಲಿ ಭಾನುವಾರ ನಡೆದ ಕಪ್ಪು ಬಾವುಟ ಪ್ರದರ್ಶನ ಹಿನ್ನೆಲೆಯಲ್ಲಿ, ದಲಿತ ಮುಖಂಡರನ್ನು ಸರ್ಕಿಟ್ ಹೌಸ್‌ಗೆ ಆಹ್ವಾನಿಸಿ ಸೋಮವಾರ ಬೆಳಿಗ್ಗೆ ರಾಹುಲ್ ಗಾಂಧಿ ಅವರು ಮಾತುಕತೆ ನಡೆಸಿದರು.

ರಾಹುಲ್ ಗಾಂಧಿ ಅವರು ಪ್ರತ್ಯೇಕವಾಗಿ ದಲಿತ ಮುಖಂಡರೊಂದಿಗೆ 10 ನಿಮಿಷ ಮಾತನಾಡಿದರು. ಈ ಭಾರಿ ವಿಧಾನಸಭೆ ಚುನಾವಣೆಯಲ್ಲಿ ಅಸ್ಪೃಶ್ಯ ಜಾತಿಗಳ ಮುಖಂಡರಿಗೆ ಆದ್ಯತೆ ಮೇರೆಗೆ ಟಿಕೆಟ್ ನೀಡುತ್ತೇವೆ ಎನ್ನುವ ಭರವಸೆ ಕೂಡಾ ನೀಡಿದ್ದಾರೆ ಎಂದರು.

ದಲಿತ ಮುಖಂಡರಾದ ಅಂಬಣ್ಣ ಅರೋಲಿಕರ, ರವೀಂದ್ರ ಪಟ್ಟಿ ಮತ್ತಿತರರು ಮಾತುಕತೆಗೆ ಹೋಗಿದ್ದರು.

ಇನ್ನಷ್ಟು: ರಾಹುಲ್ ಗಾಂಧಿ ಸಾಗುತ್ತಿದ್ದ ಬಸ್‌ ತಡೆದು ಕಪ್ಪು ಬಾವುಟ ಪ್ರದರ್ಶನ: ವಿಡಿಯೊ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.