ಮದ್ದೂರು: ಸಮೀಪದ ನಗರಕೆರೆ ಗ್ರಾಮದಲ್ಲಿ ಶುಕ್ರವಾರ ಗಂಡನ ಮನೆಯ ಅಸ್ತಿತ್ವಕ್ಕೆ ಆಗ್ರಹಿಸಿ ಗೃಹಿಣಿಯೊಬ್ಬರು ಮಾವನ ಮನೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಗೌಡಯ್ಯನದೊಡ್ಡಿ ಗ್ರಾಮದ ಲಕ್ಷ್ಮಿ ಹಾಗೂ ಸಂಬಂಧಿಕರು ಧರಣಿ ಆರಂಭಿಸಿದ್ದು, ನ್ಯಾಯ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಲಕ್ಷ್ಮಿ ತಿಳಿಸಿದ್ದಾರೆ.

ತಾಲ್ಲೂಕಿನ ಗೌಡಯ್ಯನದೊಡ್ಡಿ ಗ್ರಾಮದ ನಾಗಣ್ಣ ಪುಷ್ಪಾ ದಂಪತಿ ಮಗಳಾದ ಲಕ್ಷ್ಮಿ ಎಂಬವವರೊಂದಿಗೆ ನಗರಕೆರೆ ಗ್ರಾಮದ ಶಿವಲಿಂಗಯ್ಯ ಹಾಗೂ ಪುಷ್ಪಾಪವತಿ ದಂಪತಿ ಪುತ್ರ ಎನ್.ಎಸ್.ಜನಾರ್ದನ್ ಅವರೊಂದಿಗೆ 5 ವರ್ಷಗಳ ಹಿಂದೆ ವಿವಾಹವಾಗಿತ್ತು, ಇವರಿಗೆ 5 ವರ್ಷದ ಓನೀಶಾ ಎಂಬ ಪುತ್ರಿ ಇದ್ದಾಳೆ. ಇದೀಗ ಇವರು 9 ತಿಂಗಳ ಗರ್ಭಿಣಿಯಾಗಿದ್ದಾರೆ.

ಲಕ್ಷ್ಮಿ ಅವರ ಪತಿ ಜನಾರ್ದನ್ ದಸರಾದ ಆಯುಧಪೂಜೆ ಸಂದರ್ಭ ದಲ್ಲಿ ಕೊಲೆಯಾಗಿದ್ದಾರೆ. ತಿಥಿ ಕಾರ್ಯದ ಮುಗಿದ ನಂತರ ಲಕ್ಷ್ಮಿ ಅವರನ್ನು ಮನೆಯಿಂದ ಹೊರಹಾಕಿದ್ದರು.

‘ನನಗೆ ಹಾಗೂ ನನ್ನ ಮಗಳಿಗೆ ಮನೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಬೇಕು. ಅಲ್ಲದೇ ತಮ್ಮ ಜೀವನ ನಿರ್ವಹಣೆಗೆ ಅಗತ್ಯ ಆಸ್ತಿ ನೀಡಬೇಕು’ ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.