ಸೋಮವಾರ, ಆಗಸ್ಟ್ 10, 2020
26 °C

ಈಜು: ಚಾಡ್‌ ಲೆ ಕ್ಲೊಸ್‌ಗೆ ಚಿನ್ನ

ಎಎಫ್ ಪಿ Updated:

ಅಕ್ಷರ ಗಾತ್ರ : | |

ಈಜು: ಚಾಡ್‌ ಲೆ ಕ್ಲೊಸ್‌ಗೆ ಚಿನ್ನ

ಗೋಲ್ಡ್‌ ಕೋಸ್ಟ್‌: ದಕ್ಷಿಣ ಆಫ್ರಿಕಾದ ಚಾಡ್‌ ಲೆ ಕ್ಲೊಸ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಆಪ್ಟಸ್‌ ಈಜು ಕೇಂದ್ರದಲ್ಲಿ ಶನಿವಾರ ನಡೆದ ಪುರುಷರ 200 ಮೀಟರ್ಸ್‌ ಬಟರ್‌ಫ್ಲೈ ಫೈನಲ್‌ನಲ್ಲಿ ಚಾಡ್‌ ಅವರು ಒಂದು ನಿಮಿಷ 54.00 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಆಸ್ಟ್ರೇಲಿಯಾದ ಡೇವಿಡ್‌ ಮಾರ್ಗನ್‌ (1:56.36ಸೆ.) ಬೆಳ್ಳಿ ಗೆದ್ದರೆ, ಸ್ಕಾಟ್ಲೆಂಡ್‌ನ ಡಂಕನ್‌ ಸ್ಕಾಟ್‌ (1:56.60ಸೆ.) ಕಂಚು ತಮ್ಮದಾಗಿಸಿಕೊಂಡರು. ಭಾರತದ ಸಾಜನ್‌ ಪ್ರಕಾಶ್‌ (1:59.05ಸೆ.) ಎಂಟನೆಯವರಾಗಿ ಸ್ಪರ್ಧೆ ಮುಗಿಸಿದರು.

ಪುರುಷರ 100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ಇಂಗ್ಲೆಂಡ್‌ನ ಆ್ಯಡಮ್‌ ಪೀಟಿ, ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಅವರು 58.84 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಮಹಿಳೆಯರ 50 ಮೀಟರ್ಸ್‌ ಫ್ರೀಸ್ಟೈಲ್‌ ವಿಭಾಗದಲ್ಲಿ ಆಸ್ಟ್ರೇಲಿಯಾದ ಕೇಟ್‌ ಕ್ಯಾಂಪ್‌ಬೆಲ್‌ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರು 23.78 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು.

ಮಹಿಳೆಯರ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕೆನಡಾದ ಕೇಲಿ ಮಾಸೆ (58.63ಸೆ.) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಮಹಿಳೆಯರ 4X200 ಮೀಟರ್ಸ್‌ ಫ್ರೀಸ್ಟೈಲ್‌ ರಿಲೇ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾ ತಂಡ ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿತು.

ಎಮ್ಮಾ ಮೆಕ್‌ಕಿಯೊನ್‌, ಬ್ರಿಯಾನ್ನ ಥ್ರೊಸೆಲ್‌, ಲೀಹ್‌ ನಿಯೆಲ್‌ ಮತ್ತು ಅರಿಯಾರ್ನ್‌ ಟಿಟಮಸ್‌ ಅವರಿದ್ದ ತಂಡ 7 ನಿಮಿಷ 48.04 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.