ಅಫಜಲಪುರದಲ್ಲಿ ಮಾಲೀಕಯ್ಯ ಗೆದ್ದು ತೋರಿಸಲಿ: ಪ್ರಿಯಾಂಕ್

ಭಾನುವಾರ, ಮಾರ್ಚ್ 24, 2019
33 °C

ಅಫಜಲಪುರದಲ್ಲಿ ಮಾಲೀಕಯ್ಯ ಗೆದ್ದು ತೋರಿಸಲಿ: ಪ್ರಿಯಾಂಕ್

Published:
Updated:
ಅಫಜಲಪುರದಲ್ಲಿ ಮಾಲೀಕಯ್ಯ ಗೆದ್ದು ತೋರಿಸಲಿ: ಪ್ರಿಯಾಂಕ್

ಕಲಬುರ್ಗಿ: ‘ಅಪ್ಪ–ಮಗನನ್ನು ಸೋಲಿಸುತ್ತೇನೆ ಎಂದು ಹೇಳುವ ಮಾಲೀಕಯ್ಯ ಗುತ್ತೇದಾರ ಅಫಜಲಪುರದಲ್ಲಿ ಗೆದ್ದು ತೋರಿಸಲಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಲೀಕಯ್ಯ ನನ್ನನ್ನು ಬಚ್ಚಾ ಎಂದು ಕರೆದಿದ್ದಾರೆ. ಬಚ್ಚಾ ಯಾರು ಎಂಬುದನ್ನು ಮತದಾರರು ತೀರ್ಮಾನಿಸುತ್ತಾರೆ. ಅಫಜಲಪುರ ಕ್ಷೇತ್ರಕ್ಕೆ ಹೋಗಿ ನಾನು ಪ್ರಚಾರ ಮಾಡುತ್ತೇನೆ’ ಎಂದು ಹೇಳಿದರು.

‘ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದು ಗಾಳಿ ಸುದ್ದಿ. ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಇಂತಹ ಗಾಳಿ ಸುದ್ದಿ ಹಬ್ಬಿಸಿದೆ. ನಾನು ಚಿತ್ತಾಪುರದಿಂದಲೇ ಸ್ಪರ್ಧಿಸುತ್ತೇನೆ. ಯಾವುದೇ ಅನುಮಾನ ಬೇಡ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry