ಸಾಗರ: ಮೌಲ್ಯ ಸೊಕೋಟನ್ ಕರಾಟೆ ಡು ಅಸೋಸಿಯೇಷ್‌ನಿಂದ ನೇಪಾಳದ ಕಠ್ಮಂಡುವಿನಲ್ಲಿ ಏಪ್ರಿಲ್ 22ರಂದು ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಇಲ್ಲಿನ ಕರಾಟೆ ಅಸೋಶಿಯೇಷನ್‌ನ 11 ಕರಾಟೆ ಪಟುಗಳು ಭಾಗವಹಿಸಲಿದ್ದಾರೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಹಾಗೂ ಕರಾಟೆ ತರಬೇತುದಾರ ಸನ್‌ಸೈನ್ ಪಂಚಪ್ಪ ತಿಳಿಸಿದ್ದಾರೆ.

14ರಿಂದ 21ವಯೋಮಿತಿಯವರಿಗಾಗಿ ಕಠ್ಮಂಡುವಿನಲ್ಲಿ ಕಟಾ ಮತ್ತು ಕಮತಿ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ತೂಕ ಮತ್ತು ವಯೋಮಾನವನ್ನು ಆಧರಿಸಿ ಸ್ಪರ್ಧಿಗಳ ವಿಭಾಗವನ್ನು ನಿಗದಿ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾಲ್ಲೂಕಿನ ಸಾತ್ವಿಕ್.ಜಿ.ಎಸ್, ದೀಪ, ದೀಕ್ಷಿತ್.ಸಿ, ಛಾಯಾ.ಬಿ.ಆರ್, ಅಭಿರಾಮ.ಟಿ.ಎಸ್, ಫರ್ಮಾನ್ ಅಹಮ್ಮದ್, ಮೇಘನಾ.ಎಂ.ಬಿ, ಅಭಿಷೇಕ್.ಎ, ಮೇಘನಾ.ಡಿ, ಅರ್ಪಿತಾ, ವಿಘ್ನೇಶ್ ಇವರುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ 6 ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ ಎಂದು ತಿಳಿಸಿದರು.

ಉದಯೋನ್ಮುಖ ಕರಾಟೆ ಪಟುಗಳಿಗೆ ಸಾರ್ವಜನಿಕರು, ಸಂಘಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಿದರೆ ಅವರು ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬಹುದು. ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಾದರೆ ಹೆಚ್ಚಿನ ಖರ್ಚು ವೆಚ್ಚ ಉಂಟಾಗುತ್ತಿದೆ. ಸದ್ಯಕ್ಕೆ ನಮ್ಮ ಸಂಸ್ಥೆಯೆ ಅದನ್ನು ಭರಿಸುತ್ತಿದೆ ಎಂದು ಹೇಳಿದರು.

ಪ್ರಜಾ ವಿಮೋಚನಾ ಸೇನೆ ಮಾನವತಾವಾದ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಸ್ವಾಮಿ, ಇಮ್ತಿಯಾಜ್ ಅಹಮ್ಮದ್, ದೇವರಾಜ್.ಬಿ, ಹೊಳಿಯಪ್ಪ ಮುಂಬಾಳು ಹಾಗೂ ಕರಾಟೆ ಪಟುಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.