ಮಿಶ್ರ ತಳಿ: ಯತ್ನಾಳ ವ್ಯಂಗ್ಯ

7

ಮಿಶ್ರ ತಳಿ: ಯತ್ನಾಳ ವ್ಯಂಗ್ಯ

Published:
Updated:
ಮಿಶ್ರ ತಳಿ: ಯತ್ನಾಳ ವ್ಯಂಗ್ಯ

ವಿಜಯಪುರ: ‘ರಾಹುಲ್ ಗಾಂಧಿ 2019ಕ್ಕೆ ಯಾವ ದೇಶದ ಪ್ರಧಾನಿಯಾಗಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ’ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

‘ಪ್ರಧಾನಿಯಾಗುವೆ ಎಂದು ರಾಹುಲ್‌ ಸಂವಾದವೊಂದರಲ್ಲಿ ಹೇಳಿದ್ದಾರೆ. ಅವರು ಪಕ್ಕಾ ಭಾರತೀಯನೂ ಅಲ್ಲ. ಅತ್ತ ವಿದೇಶಿಗನೂ ಆಗಿಲ್ಲ. ಅವರೊಬ್ಬ ಮಿಶ್ರ ತಳಿಯಾಗಿದ್ದಾರೆ’ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

‘ಲೆಟರ್‌ಪ್ಯಾಡ್‌ ಲೀಡರ್‌ಗಳ ಹೇಳಿಕೆಗೆ ಕಿಮ್ಮತ್ತು ನೀಡುವ ಅಗತ್ಯವಿಲ್ಲ. ನಾವು ಹೋದೆಡೆ ಅಭಿಮಾನಿ ಬಳಗ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತೆ. ಅವರೆಲ್ಲ ನಮ್ಮ ಬೆಂಬಲಿಗರಾ? ಕಾರ್ಯಕರ್ತರಾ? ಅವರಿಗೆ ನಾವೇನು ರೇಪ್‌ ಮಾಡಿ ಅಂಥ ಹೇಳ್ತೀವಾ?’ ಎಂದು ಯತ್ನಾಳ, ಈಚೆಗೆ ಗುಜರಾತ್‌ನ ಶಾಸಕ ಜಿಗ್ನೇಶ ಮೇವಾನಿ ಮಾಡಿದ ಟೀಕೆಗೆ ತಿರುಗೇಟು ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry