ಸೋಮವಾರ, ಮಾರ್ಚ್ 1, 2021
23 °C

ಚಾಮುಂಡೇಶ್ವರಿ: ತವರಿನಲ್ಲೇ ಸಿದ್ದರಾಮಯ್ಯಗೆ ಹೀನಾಯ ಸೋಲು, ಜಿ.ಟಿ. ದೇವೇಗೌಡ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮುಂಡೇಶ್ವರಿ: ತವರಿನಲ್ಲೇ ಸಿದ್ದರಾಮಯ್ಯಗೆ ಹೀನಾಯ ಸೋಲು, ಜಿ.ಟಿ. ದೇವೇಗೌಡ ಗೆಲುವು

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಕಣಕಿಳಿದ್ದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದು ಸುತ್ತಿನಲ್ಲೂ ಮುನ್ನಡೆ ಸಾಧಿಸದೆ ಹೀನಾಯ ಸೋಲು ಕಂಡಿದ್ದಾರೆ.  ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರು ಪಡೆದ ಒಟ್ಟು ಮತಗಳು ಲಕ್ಷದ ಗಡಿ ದಾಟಿ, ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಸಿದ್ದರಾಮಯ್ಯ ಅವರು ತವರೂರಿನಲ್ಲೇ ಸೋಲು ಕಂಡಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಭಾರಿ ಆಘಾತ ನೀಡಿದ್ದಾರೆ.

23ನೇ ಸುತ್ತಿನ ಅಂತ್ಯಕ್ಕೆ ಜಿ.ಟಿ.ಡಿ ಒಟ್ಟು 1,15,081 ಮತ ಪಡೆದಿದ್ದಾರೆ. ಈ ಮೂಲಕ ಸಮೀಪದ ಪ್ರತಿಸ್ಪರ್ಧಿ ಸಿದ್ದರಾಮಯ್ಯ ವಿರುದ್ಧ 34,511 ಮತಗಳ ಅಂತರದಿಂದ ಮುನ್ನಡೆ ಹೊಂದಿದ್ದಾರೆ. ಸಿದ್ದರಾಮಯ್ಯ ಕೇವಲ 80,570 ಮತ ಪಡೆದಿದ್ದಾರೆ. ಇತರರು 10 ಸಾವಿರ ಮತ ಗಳಿಸಿದ್ದಾರೆ. ನೋಟಾಗೆ 1400ಮತಗಳು ಬಿದ್ದಿವೆ. ಇನ್ನು ಎಣಿಕೆಗೆ 20 ಸಾವಿರ ಮತಗಳು ಬಾಕಿ ಇವೆ. ಕ್ಷೇತ್ರದಲ್ಲಿ 2,24,968 ಮಂದಿ ಮತ ಚಲಾಯಿಸಿದ್ದರು.

11ನೇ ಸುತ್ತಿನಲ್ಲಿ 22 ಸಾವಿರ ಮತಗಳ ಅಂತರ ಮುನ್ನಡೆ ಕಾಯ್ದುಕೊಂಡಿದ್ದರು.

12ನೇ ಸುತ್ತಿನಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ 24,072 ಮತಗಳ ಮುನ್ನಡೆ ಸಾಧಿಸಿದ್ದರು. ಜಿ.ಟಿ.ದೇವೇಗೌಡ 61,351 ಮತ ಪಡೆದಿದ್ದರು, ಸಿದ್ದರಾಮಯ್ಯ 37,279 ಮತ ಗಳಿಸಿದ್ದಾರೆ.

14ನೇ ಸುತ್ತಿನ ಅಂತ್ಯಕ್ಕೆ ಜಿ.ಟಿ. ದೇವೇಗೌಡ ಅವರು 70,232 ಮತ ಪಡೆದಿದ್ದರು. ಸಿದ್ದರಾಮಯ್ಯ ಕೇವಲ 45,048 ಮತ ಗಳಿಸಿದ್ದರು.

ದೇವೇಗೌಡ ಅವರು ಪಡೆದ ಒಟ್ಟು ಮತಗಳು ಲಕ್ಷದ ಗಡಿ ದಾಟಿದರು. 20ನೇ ಸುತ್ತಿನ ಅಂತ್ಯಕ್ಕೆ ಅವರು ಒಟ್ಟು 1,00,308 ಮತ ಪಡೆದಿದ್ದಾರೆ. ಈ ಮೂಲಕ ಸಮೀಪದ ಪ್ರತಿಸ್ಪರ್ಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 34,409 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲು ಇಟ್ಟರು. ಸಿದ್ದರಾಮಯ್ಯ 65,899 ಮತ ಪಡೆದಿದ್ದರು.

ಜನ ತಿರಸ್ಕರಿಸಿದ್ದಾರೆ: ಜಿ.ಟಿ. ದೇವೇಗೌಡ

ಸಿದ್ದರಾಮಯ್ಯ ಅವರ ವರ್ತನೆ ಹಾಗೂ ಅಕ್ರಮಣಕಾರಿ ವರ್ತನೆಯನ್ನು ಜನರು ತಿರಸ್ಕರಿಸಿದ್ದಾರೆ ಎಂದು ಗೆಲುವು ಪಡೆದ ಜಿ.ಟಿ. ದೇವೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.