ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರ ಹಳೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತರ ಮೂವರೊಂದಿಗೆ ಮಾನ್ ಅವರು ನೆಲದ ಮೇಲೆ ಕುಳಿತಿದ್ದಾರೆ. ಇದು 12 ವರ್ಷಗಳ ಹಿಂದೆ ತೆಗೆಯಲಾದ ಚಿತ್ರ. ಬೈಕ್ ಕದ್ದಿದ್ದ ಅಪರಾಧಕ್ಕಾಗಿ ಭಗವಂತ್ ಮಾನ್ ಮತ್ತು ಅವರ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದರು ಎಂಬ ಮಾಹಿತಿ ಜೊತೆ ಈ ಚಿತ್ರವು ವೈರಲ್ ಆಗಿದೆ. ‘ಈ ಚಿತ್ರದಲ್ಲಿರುವವರನ್ನು ಗುರುತಿಸಬಲ್ಲಿರಾ? ಪಂಜಾಬ್ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದಾಗ ತೆಗೆದ ಚಿತ್ರ ಇದು’ ಎಂದು ಅಡಿಬರಹ ನೀಡಲಾಗಿದೆ.

ಚಿತ್ರದ ಜೊತೆ ಇರುವ ಮಾಹಿತಿ ಸುಳ್ಳು ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ವೇದಿಕೆ ವರದಿ ಮಾಡಿದೆ. ಇದು ಹೋಳಿ ಆಚರಣೆಯ ಸಂದರ್ಭದಲ್ಲಿ ತೆಗೆದಿರುವ ಚಿತ್ರ ಎಂದು ವರದಿಯಲ್ಲಿ ಹೇಳಲಾಗಿದೆ. ಪಂಜಾಬಿ ಗಾಯಕ ಮತ್ತು ನಟ ಕರಮ್‌ಜಿತ್ ಅನ್ಮೋಲ್ ಅವರು ಮಾರ್ಚ್ 18ರಂದು ಈ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಭಗವಂತ ಮಾನ್ ಮತ್ತು ಮಂಜಿತ್ ಸಿಧು ಅವರ ಜೊತೆ ಹೋಳಿ ನೆನಪುಗಳು’ ಎಂದು ಅಡಿಬರಹ ನೀಡಿದ್ದಾರೆ. ಮಂಜಿತ್ ಸಿಧು ಕೂಡಾ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.