‘ಭಾರತ ಮತ್ತು ಪಾಕಿಸ್ತಾನದ ನಡುವೆ 2025ರ ಮೇನಲ್ಲಿ ನಡೆದ ಸೇನಾ ಸಂಘರ್ಷದಲ್ಲಿ ಭಾರತೀಯ ವಾಯುಪಡೆಯು 10 ರಫೇಲ್ ಯುದ್ಧ ವಿಮಾನಗಳನ್ನು ಕಳೆದುಕೊಂಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಕೊಂಡಿದ್ದಾರೆ’ ಎಂದು ಪ್ರತಿಪಾದಿಸುತ್ತಾ ಮುಸಾಫಿರ್ ಎಂಬ ಫೇಸ್ಬುಕ್ ಬಳಕೆದಾರ ಫೆ.20ರಂದು ಮೋದಿ ಅವರು ಮಾತನಾಡುತ್ತಿರುವ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದ ವಿಡಿಯೊ ತುಣುಕು. ಆದರೆ, ಈ ಮಾಹಿತಿ ಸುಳ್ಳು.

ವಿಡಿಯೊ ತುಣುಕಿನಿಂದ ಪ್ರತ್ಯೇಕಿಸಲಾದ ಒಂದು ಕೀಫ್ರೇಮ್ ಅನ್ನು ಗೂಗಲ್ ಲೆನ್ಸ್ ಮೂಲಕ ರಿವರ್ಸ್ ಸರ್ಚ್ ವಿಧಾನದಲ್ಲಿ ಹುಡುಕಿದಾಗ ಹಲವರು ಇದೇ ವಿಡಿಯೊವನ್ನು ಹಂಚಿಕೊಂಡಿರುವುದು ಕಂಡು ಬಂತು. ಇನ್ನಷ್ಟು ಹುಡುಕಿದಾಗ, ಮುಂಬೈನಲ್ಲಿ ಮೋದಿ ಮತ್ತು ಮ್ಯಾಕ್ರನ್ ಅವರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯ 29 ನಿಮಿಷಗಳ ಮೂಲ ವಿಡಿಯೊ ಸಿಕ್ಕಿತು. ಅದನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಪೋಸ್ಟ್ನಲ್ಲಿ ಹೇಳಿದಂತೆ ಮೋದಿ ಅವರು ಎಲ್ಲೂ ಹೇಳಿಕೆ ನೀಡಿರಲಿಲ್ಲ. ಹೀಗಾಗಿ, ಆಡಿಯೊವನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ತಿದ್ದುಪಡಿ ಮಾಡಿರಬಹುದು ಎಂಬ ಅನುಮಾನ ಬಂತು. ವಿಡಿಯೊದಿಂದ ಆಡಿಯೊವನ್ನು ಪ್ರತ್ಯೇಕಿಸಿ ಎಐ ಧ್ವನಿ ಪತ್ತೆ ಟೂಲ್ ‘ರಿಸೆಂಬಲ್ ಎಐ’ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ ಅದು ಧ್ವನಿ ತಿರುಚಿರುವುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.