ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check| ಹಣ ಸಂಪಾದನೆಗಾಗಿ ಮದುವೆ ಮನೆಯಲ್ಲಿ ಕುಣಿದರೇ ಶಾರುಕ್‌?

Last Updated 24 ಜನವರಿ 2023, 19:30 IST
ಅಕ್ಷರ ಗಾತ್ರ

ಬಾಲಿವುಡ್ ನಟ ಶಾರುಕ್ ಖಾನ್ ಅವರ ಅಭಿನಯದ ‘ಪಠಾಣ್’ ಚಿತ್ರವನ್ನು ನಿಷೇಧಿಸಬೇಕು ಎಂಬ ವಿವಾದದ ನಡುವೆಯೇ, ಅವರು ಮದುವೆ ಸಮಾರಂಭವೊಂದರಲ್ಲಿ ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಶಾರುಕ್ ಯಾರು. ತನ್ನ 60ನೇ ವಯಸ್ಸಿನಲ್ಲಿ ಯಾರದ್ದೋ ಮದುವೆ ಮಂಟಪದಲ್ಲಿ ಒಂದಿಷ್ಟು ಹಣ ಸಂಪಾದನೆಗಾಗಿ ಕುಣಿಯುವ ಕಾರ್ಮಿಕ. ಇದು ಶಾರುಕ್ ಯೋಗ್ಯತೆ. ಇದುವೇ ಆತನ ನಿಜವಾದ ವೃತ್ತಿ. ದುಡ್ಡಿನಿಂದ ಗೌರವವನ್ನು ಖರೀದಿಸಲಾಗದು’ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಈ ವಿಡಿಯೊ ಜೊತೆಗೆ ಬರೆದಿದ್ದಾರೆ. ಆದರೆ, ಇದು ನಿಜವಲ್ಲ. ಈ ವಿಡಿಯೊದಲ್ಲಿರುವುದು ಶಾರುಕ್‌ ಹೋಲುವ ವ್ಯಕ್ತಿ.

ಶಾರುಕ್ ಅವರ ಚಹರೆಯನ್ನು ಹೋಲುವ ಇಬ್ರಾಹಿಂ ಖಾದ್ರಿ ಎಂಬುವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 52 ಸೆಕೆಂಡ್‌ನ ಈ ವಿಡಿಯೊವನ್ನು 2022ರ ಜುಲೈ 12ರಂದು ಅಪ್‌ಲೋಡ್ ಮಾಡಿದ್ದಾರೆ. ಇವರನ್ನೇ, ಬಾಲಿವುಡ್ ನಟ ಶಾರುಕ್ ಎಂದು ತಪ್ಪಾಗಿ ಅರ್ಥೈಸಿಕೊಂಡು ಪೋಸ್ಟ್ ಹಾಕಲಾಗಿದೆ ಎಂದು ‘ಇಂಡಿಯಾಟುಡೇ’ ವೆಬ್‌ಸೈಟ್ ವರದಿ ಮಾಡಿದೆ. ‘ಪಠಾಣ್’ ಚಿತ್ರವನ್ನು ನಿಷೇಧಿಸಬೇಕು ಎಂಬ ಅಭಿಯಾನವನ್ನು ಈ ವಿಡಿಯೊ ಜೊತೆ ತಳಕು ಹಾಕಲಾಗಿದೆ. ಈ ಹಿಂದೆ, ಶಾರುಕ್ ಅವರು ಜೈಲಿನಲ್ಲಿದ್ದ ತಮ್ಮ ಪುತ್ರ ಆರ್ಯನ್ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾದ ವಿಡಿಯೊ ಸಹ ಹರಿದಾಡಿತ್ತು. ಶಾರುಕ್‌ ಹಾಗೂ ಅವರ ಪುತ್ರನನ್ನು ಹೋಲುವ ರೀತಿ, ಖಾದ್ರಿ ಹಾಗೂ ಅವರ ಸ್ನೇಹಿತ ಕಾಣಿಸಿಕೊಂಡಿದ್ದ ವಿಡಿಯೊವನ್ನೇ ನೈಜ ಎಂದು ಬಿಂಬಿಸಿ ಹಂಚಿಕೊಳ್ಳಲಾಗಿತ್ತು ಎಂದು ವೆಬ್‌ಸೈಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT