ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ‘ಆಜಾನ್‌’ ಹಾಕಿದ್ದಾರೆ ಎನ್ನುವುದು ಸುಳ್ಳು ಸುದ್ದಿ

Published 6 ಡಿಸೆಂಬರ್ 2023, 0:00 IST
Last Updated 6 ಡಿಸೆಂಬರ್ 2023, 0:00 IST
ಅಕ್ಷರ ಗಾತ್ರ

ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ನಾಯಕರು ಸಭೆಯಲ್ಲಿ ಗುಂಪುಚಿತ್ರ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಮುಸ್ಲಿಮರ ‘ಆಜಾನ್‌’ ಅನ್ನು ಹಾಕಲಾಗಿದೆ ಎಂದು ಆರೋಪಿಸಿ, ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಈ ಮೈತ್ರಿಕೂಟದಿಂದ ಎಚ್ಚರದಲ್ಲಿರಿ’ ಎಂಬಂಥ ಪೋಸ್ಟ್‌ಗಳನ್ನು ಈ ವಿಡಿಯೊದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ. ವಿಡಿಯೊವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವಿಡಿಯೊದಲ್ಲಿ ಇರುವ ದೃಶ್ಯಗಳಲ್ಲಿ, ‘ಇಂಡಿಯಾ’ ಮೈತ್ರಿಕೂಟದ ನಾಯಕರು ಗುಂಪುಚಿತ್ರಕ್ಕೆ ನಿಂತಿರುವ ಹಿಂಬದಿಯಲ್ಲಿ ದೊಡ್ಡದಾದ ಡಿಜಿಟಿಲ್‌ ಬ್ಯಾನರ್‌ವೊಂದು ಕಾಣಿಸುತ್ತದೆ. ಈ ಬ್ಯಾನರ್‌ನಲ್ಲಿ ಆಗಸ್ಟ್‌ 31 ಹಾಗೂ ಸೆಪ್ಟೆಂಬರ್‌ 1 ಎಂದು ಬರೆದುಕೊಳ್ಳಲಾಗಿದೆ. ಇದೇ ದಿನಾಂಕಗಳಲ್ಲಿ ಮುಂಬೈನಲ್ಲಿ ಈ ಮೈತ್ರಿಕೂಟದ ಸಭೆ ನಡೆದಿತ್ತು. ಈ ಬಗ್ಗೆ ಹಲವು ಪತ್ರಿಕೆಗಳು ವರದಿ ಮಾಡಿದ್ದವು ಹಾಗೂ ವಿಡಿಯೊಗಳನ್ನು ಚಿತ್ರೀಕರಿಸಿ ತಮ್ಮ ತಮ್ಮ ಡಿಜಿಟಲ್‌ ಚಾನೆಲ್‌ಗಳಲ್ಲಿ ಪ್ರಸಾರ ಮಾಡಿದ್ದವು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಿಗೂ ಪತ್ರಿಕೆಗಳು ಪ್ರಸಾರ ಮಾಡಿದ ವಿಡಿಯೊ ತುಣುಕುಗಳಿಗೂ ಹೋಲಿಕೆ ಇದೆ. ಆದರೆ, ಆ ವಿಡಿಯೊಗಳಲ್ಲಿ ‘ಆಜಾನ್‌’ ಇರಲಿಲ್ಲ. ಈಗ ಆ ದೃಶ್ಯಗಳಿಗೆ ಆಜಾನ್‌ನ ಆಡಿಯೊವನ್ನು ಸೇರಿಸಿ ತಿರುಚಿದ ವಿಡಿಯೊವನ್ನು ಸೃಷ್ಟಿಸಿ ಹಂಚಿಕೊಳ್ಳಲಾಗುತ್ತಿದೆ ಎಂದು ‘ದಿ ಕ್ವಿಂಟ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT