ನವದೆಹಲಿ: ನಾಮಪತ್ರಸಲ್ಲಿಕೆ ಎಂದರೇ ಇದೇ. ಕಣ್ಣು ಬಿಟ್ಟು ನೋಡಿ ಈ ಸಿಂಹದ ನಡಿಗೆಯನ್ನು ಎಂಬ ಶೀರ್ಷಿಕೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಲು ಹೋಗುತ್ತಿರುವ ದೃಶ್ಯ ಇದು ಎಂದು ವಿಡಿಯೊದಲ್ಲಿ ಹೇಳಲಾಗಿದೆ.

ಸೃಷ್ಟಿರಾಜ್ಚೌಹಾಣ್ ಎಂಬವರು ಈ ವಿಡಿಯೊ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದು, ಇದು 2 ಸಾವಿರಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿದೆ. ಇದೇ ವಿಡಿಯೊವನ್ನು ಹಲವಾರು ನೆಟ್ಟಿಗರು ಶೇರ್ ಮಾಡಿದ್ದಾರೆ.

ಈ ವಿಡಿಯೊವನ್ನು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದ್ದು , ಇಲ್ಲಿರುವ ವಿಡಿಯೊ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಯಾತ್ರೆಯ ವಿಡಿಯೊ ಎಂದು ಹೇಳಿದೆ.

ಫ್ಯಾಕ್ಟ್ಚೆಕ್
ಅಲಂಕೃತವಾದ ವಾಹನವೊಂದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡೆದು ಕೊಂಡು ಹೋಗುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ.ಭದ್ರತಾ ಸಿಬ್ಬಂದಿಗಳು ಕೂಡಾ ಮೋದಿ, ಅಮಿತ್ ಶಾ ಅವರನ್ನು ಸುತ್ತುವರಿದು ಸಾಗುತ್ತಿರುವ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಅದೇ ವೇಳೆ ವಿಡಿಯೊವನ್ನು ಗಮನವಿಟ್ಟು ನೋಡಿದರೆ ಅಲ್ಲಿ ವಾಜಪೇಯಿ ಅವರ ಚಿತ್ರ ಕಾಣುತ್ತದೆ.

ಯುಟ್ಯೂಬ್ನಲ್ಲಿ Atal Bihari Vajpayee procession ಎಂದು ಸರ್ಚ್ ಮಾಡಿದರೆ ಇದೇ ವಿಡಿಯೊ ಕಾಣಿಸುತ್ತದೆ. ಇದು ಮೋದಿ ನಾಮಪತ್ರ ಸಲ್ಲಿಸುವ ವಿಡಿಯೊ ಅಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಯಾತ್ರೆಯ ವಿಡಿಯೊ ಇದು ಎಂದು ಸ್ಪಷ್ಟವಾಗಿದೆ.

ಅಂದ ಹಾಗೆ ನರೇಂದ್ರಮೋದಿಯವರು ಇನ್ನೂ ನಾಮಪತ್ರಿಕೆ ಸಲ್ಲಿಸಿಲ್ಲ. ಏಪ್ರಿಲ್ 26ರಂದು ಅವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.