ಇತ್ತೀಚೆಗೆ ನಡೆದ ಸಂಸತ್ತಿನ ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರು ರಾಮಾಯಣದ ಕೆಲವು ಘಟನೆಗಳ ಕುರಿತು ಮಾತನಾಡಿದ್ದರು. ಈ ಬಗ್ಗೆ ಕೆಲವು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಅಣ್ಣಂದಿರೇ, ತಂಗಿಯರೇ..’ ಸಂಸತ್ತಿನಲ್ಲಿ ಉದ್ದೇಶಿಸುವ ವಿಧಾನವೇ ಇದು? ಜೊತೆಗೆ, ‘ಲಂಕೆಗೆ ಹನುಮಂತ ಬೆಂಕಿ ಇಡಲಿಲ್ಲ’ ಎಂದೂ ಹೇಳಿದ್ದಾರೆ. ರಾಮಾಯಣ ವರ್ಷನ್ 2 ಬರುತ್ತಿದೆ’ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ಈ ರೀತಿ ಮಾತನಾಡಿಲ್ಲ.
ಸಂಸತ್ತಿನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ‘ಲಂಕೆಗೆ ಹನುಮಂತ ಬೆಂಕೆ ಇಡಲಿಲ್ಲ. ಬದಲಿಗೆ ರಾವಣನ ಅಹಂಕಾರವೇ ಬೆಂಕಿ ಇಟ್ಟಿದೆ’ ಎಂದು ಹೇಳಿದ್ದರು. ಆದರೆ, ಅವರ ಮಾತಿನ ಅರ್ಧ ಭಾಗವನ್ನಷ್ಟೇ ಇಟ್ಟುಕೊಂಡು ತಪ್ಪು ಮಾಹಿತಿಯೊಂದಿಗೆ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ ಎಂದು ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.