ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರ ವಿಡಿಯೊ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಂಸದ ಅನುರಾಗ್ ಠಾಕೂರ್, ಅಮಿತ್ ಮಾಳವೀಯ. ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿಯ ಕೆಲವು ಮುಖಂಡರು ಕೂಡ ವಿಡಿಯೊ ಅನ್ನು ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರೇ ತಾವು ಸಂಸದರನ್ನು ತಳ್ಳಿರುವುದು ನಿಜ ಎಂಬುದಾಗಿ ಒಪ್ಪಿಕೊಂಡಿದ್ದಾರೆ... ನಾಚಿಕೆಗೇಡು ಎಂದು ಪ್ರತಿಪಾದಿಸಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ರಾಹುಲ್ ಗಾಂಧಿ ಅವರ ವಿಡಿಯೊ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ತಳ್ಳಾಟದ ವೇಳೆ ಏನು ನಡೆಯಿತು ಎಂದು ಪತ್ರಕರ್ತರು ಪ್ರಶ್ನಿಸುತ್ತಿರುವುದು ಕೇಳಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೊ ಎಎನ್ಐ ಸುದ್ದಿಸಂಸ್ಥೆಯದ್ದಾಗಿದ್ದು, ಅದು ದೀರ್ಘವಾದ ವಿಡಿಯೋ ಆಗಿದೆ. ವಿಡಿಯೊ ಮತ್ತು ಆ ಕುರಿತ ವರದಿಯನ್ನು ಸುದ್ದಿಸಂಸ್ಥೆಯು ಎಕ್ಸ್ನಲ್ಲಿ ಹಂಚಿಕೊಂಡಿದೆ. ‘ಹೌದು, ಅದು ನಡೆದಿದ್ದು ನಿಜ’ (ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಳ್ಳಿರುವುದು) ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಆದರೆ, ತಾನು ಸಂಸದರನ್ನು ತಳ್ಳಿದ್ದು ನಿಜ ಎಂದು ರಾಹುಲ್ ಒಪ್ಪಿಕೊಂಡಿರುವುದು ವಿಡಿಯೊದಲ್ಲಿ ಇಲ್ಲ. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.