ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಸೌದಿ ಅರೇಬಿಯಾದಲ್ಲಿ ಮೋದಿಯ ಚಿನ್ನದ ಪುತ್ಥಳಿ ಪ್ರತಿಷ್ಠಾಪಿಸಿಲ್ಲ

Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

156 ಗ್ರಾಂ ಎಂದು ಬರೆದಿರುವ ಚಿಕ್ಕ ಬೋರ್ಡ್‌ ಇರುವ ಗಾಜಿನ ಪೆಟ್ಟಿಗೆ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪುತ್ಥಳಿ ಇರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಳ್ಳಲಾಗುತ್ತಿದೆ. ‘ಜನರು ಮೇಣದಿಂದ ಪುತ್ಥಳಿಗಳನ್ನು ಮಾಡುತ್ತಾರೆ. ಆದರೆ, ಮುಸ್ಲಿಂ ದೇಶವಾದ ಸೌದಿ ಅರೇಬಿಯಾದಲ್ಲಿ ಮೋದಿ ಅವರ ಚಿನ್ನದ ಪುತ್ಥಳಿಯನ್ನು ಮಾಡಿ, ಪ್ರತಿಷ್ಠಾಪಿಸಲಾಗಿದೆ. ಎಷ್ಟು ಶೇರ್‌ ಮಾಡಬೇಕು ಎಂದರೆ, ಕೆಲವರಿಗೆ ಉರಿ ಆಗುತ್ತಿರುವ ಅನುಭವವಾಗಬೇಕು’ ಎಂಬ ಬರಹವನ್ನೂ ಫೋಟೊದೊಂದಿಗೆ ಬರೆದುಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಈ ಚಿನ್ನದ ಪುತ್ಥಳಿಯ ಕುರಿತು ‘ಭಾರತ್‌ 24’, ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಹಾಗೂ ‘ಎನ್‌ಡಿಟಿವಿ’ 2023ರ ಜನವರಿಯಲ್ಲಿ ವರದಿ, ಸಂದರ್ಶನಗಳನ್ನು ಪ್ರಕಟಿಸಿವೆ. ಈ ಪುತ್ಥಳಿಯನ್ನು ತಯಾರಿಸಿದವರು ಬಸಂತ್‌ ಬೋರಾ ಎನ್ನುವ ಚಿನ್ನದ ವ್ಯಾಪಾರಿ. ಇವರ ಮೂಲ ಊರು ರಾಜಸ್ಥಾನ. ಆದರೆ, ಕಳೆದ 20 ವರ್ಷಗಳಿಂದ ಗುಜರಾತ್‌ನಲ್ಲಿ ನೆಲೆಸಿದ್ದಾರೆ. ಮೋದಿ ಅವರ ದೊಡ್ಡ ಅಭಿಮಾನಿಯಾದ ಇವರು, ಗುಜರಾತ್‌ ವಿಧಾನಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿಯು 156 ಸ್ಥಾನಗಳನ್ನು ಗೆದ್ದಿರುವ ಖುಷಿಯನ್ನು ಚಿನ್ನದ ಪುತ್ಥಳಿ ತಯಾರಿಸುವ ಮೂಲಕ ಹಂಚಿಕೊಂಡಿದ್ದಾರೆ. ಆದ್ದರಿಂದ, ಸೌದಿ ಅರೇಬಿಯಾದ ಸರ್ಕಾರ ಮೋದಿ ಅವರ ಚಿನ್ನದ ಪುತ್ಥಳಿಯನ್ನು ಸ್ಥಾಪಿಸಿಲ್ಲ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT