ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್: ರಾಹುಲ್‌ ಗಾಂಧಿ ಪತ್ರಿಕಾಗೋಷ್ಠಿಯನ್ನು ವಿರಾಟ್‌ ವೀಕ್ಷಿಸಿಲ್ಲ

Published 24 ಮಾರ್ಚ್ 2024, 21:59 IST
Last Updated 24 ಮಾರ್ಚ್ 2024, 21:59 IST
ಅಕ್ಷರ ಗಾತ್ರ

ಇತ್ತೀಚೆಗೆ 2024 ಆವೃತ್ತಿಯ ಐಪಿಎಲ್‌ ಆರಂಭಗೊಂಡಿದೆ. ಇದರ ಮೊದಲ ಪಂದ್ಯ ಆರ್‌ಬಿಸಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಮಧ್ಯೆ ಮಾರ್ಚ್‌ 22ರಂದು ನಡೆಯಿತು. ಈ ಪಂದ್ಯದ ವೇಳೆ ಆರ್‌ಬಿಐಯ ವಿರಾಟ್‌ ಕೊಹ್ಲಿ ಅವರು ತಮ್ಮ ಮೊಬೈಲ್‌ ನೋಡುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿರಾಟ್‌ ಅವರು ರಾಹುಲ್‌ ಗಾಂಧಿ ಅವರ ಪತ್ರಿಕಾಗೋಷ್ಠಿಯೊಂದನ್ನು ನೋಡುತ್ತಿದ್ದಾರೆ ಎಂದು ಜಾಲತಾಣಗಳ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರವನ್ನು ಕಾಂಗ್ರೆಸ್‌ ಪರ ಇರುವ ಹಲವು ಎಕ್ಸ್‌ ಖಾತೆಗಳು ಹಂಚಿಕೊಂಡಿವೆ. ಆದರೆ, ಇದು ತಿರುಚಿದ ಚಿತ್ರವಾಗಿದೆ.

ಕಾಂಗ್ರೆಸ್‌ ನವದೆಹಲಿಯಲ್ಲಿ ತನ್ನ ಬ್ಯಾಂಕ್‌ ಖಾತೆಯನ್ನು ಕೇಂದ್ರ ಸರ್ಕಾರವು ನಿಷ್ಕ್ರಿಯಗೊಳಿಸಿದೆ ಎಂದು ಆರೋಪಪಿಸಿ ಪತ್ರಿಕಾಗೋಷ್ಠಿಯನ್ನು ಮಾರ್ಚ್‌21ರಂದು ನಡೆಸಿತ್ತು. ಈ ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ ಅವರೂ ಮಾತನಾಡಿದ್ದರು. ಇದೇ ಪತ್ರಿಕಾಗೋಷ್ಠಿಯನ್ನು ವಿರಾಟ್‌ ಅವರು ನೋಡುತ್ತಿದ್ದಾರೆ ಎಂದು ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ವಿರಾಟ್‌ ಅವರು ಈ ಪತ್ರಿಕಾಗೋಷ್ಠಿಯನ್ನು ನೋಡುತ್ತಿರಲಿಲ್ಲ. ವಿರಾಟ್‌ ಅವರ ಅಭಿಮಾನಿಗಳ ವೆರಿಫೈಡ್‌ ಖಾತೆ ವಿರಾಟ್‌ಗ್ಯಾಂಗ್‌(ViratGang) ವಿರಾಟ್‌ ಅವರ ಚಿತ್ರವೊಂದನ್ನು ಹಂಚಿಕೊಂಡಿದೆ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಕ್ಕೂ ಈ ಚಿತ್ರಕ್ಕೂ ಹೋಲಿಕೆ ಇದೆ. ಆದರೆ, ವಿರಾಟ್‌ ಅವರ ಮೊಬೈಲ್‌ ಸ್ಕ್ರೀನ್‌ ಅನ್ನು ತಿರುಚಿ ರಾಹುಲ್‌ ಅವರ ಚಿತ್ರವನ್ನು ಜೋಡಿಸಲಾಗಿದೆ ಎಂದು ‘ನ್ಯೂಸ್‌ಚಕ್ಕರ್‌’ ಹಾಗೂ ‘ಬೂಮ್‌ಲೈವ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ.

ತಿರುಚಿದ ಚಿತ್ರ
ತಿರುಚಿದ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT