‘ಭಾರತವು ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದೆ. ಜಗತ್ತಿನ ಜುಟ್ಟು ಈಗ ಭಾರತದ ಕೈಯಲ್ಲಿದೆ. ಪಾಕಿಸ್ತಾನ, ಟರ್ಕಿ ದಿಗ್ಭ್ರಾಂತಿಗೆ ಒಳಗಾಗಿವೆ’ ಎಂಬ ಬರಹದ ಪೋಸ್ಟರ್‌ಗಳು ಕಳೆದ ಮೂರ್ನಾಲ್ಕು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ನಮೋ ಹಿಂದೂಸ್ತಾನಿ’, ‘ನಮೋ ಇಂಡಿಯಾ’ ಸೇರಿದಂತೆ ವಿವಿಧ ಫೇಸ್‌ಬುಕ್ ಪೇಜ್‌ಗಳಲ್ಲಿ ಈ ಪೋಸ್ಟರ್‌ಗಳು ಷೇರ್ ಆಗುತ್ತಿವೆ.

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದು ಇದೇ ಮೊದಲಲ್ಲ ಎಂದು ಆಲ್ಟ್ ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಗಳು ತಿಳಿಸಿವೆ. 1950ರಿಂದ ಭಾರತ ಈವರೆಗೆ 10 ಬಾರಿ ಅಧ್ಯಕ್ಷ ಹುದ್ದೆ ವಹಿಸಿಕೊಂಡಿದೆ. ಮಂಡಳಿಯಲ್ಲಿ ಐದು ಕಾಯಂ ಸದಸ್ಯ ದೇಶಗಳು ಸೇರಿ 15 ಸದಸ್ಯ ದೇಶಗಳಿವೆ. ಸದಸ್ಯ ದೇಶಗಳು ಪ್ರತಿ ಎರಡು ವರ್ಷಕ್ಕೊಮ್ಮೆ ಆಯ್ಕೆಯಾಗುತ್ತವೆ. ಪ್ರತಿ ದೇಶವು ಸರದಿ ಪ್ರಕಾರ ಒಂದು ತಿಂಗಳು ಅಧ್ಯಕ್ಷಗಿರಿ ನಡೆಸುತ್ತದೆ. ಭಾರತವು ಮತ್ತೆ ಡಿಸೆಂಬರ್‌ನಲ್ಲಿ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿದೆ. ಕಾಯಂ ಸದಸ್ಯದೇಶಗಳ ಪೈಕಿ ಚೀನಾ ವಿಟೊ ಅಧಿಕಾರ ಹೊಂದಿದ್ದು, ಕಾಯಂ ಸದಸ್ಯ ರಾಷ್ಟ್ರ ಆಗುವ ಭಾರತದ ಯತ್ನಕ್ಕೆ ಪೆಟ್ಟು ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.