ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮೋದಿ ಹೆಸರು ನಾಮನಿರ್ದೇಶನವಾಗಿಲ್ಲ

Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಅಕ್ಷರ ಗಾತ್ರ

‘ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಈ ಬಗ್ಗೆ ನೊಬೆಲ್ ಪುರಸ್ಕಾರ ಆಯ್ಕೆ ಸಮಿತಿಯ ಸದಸ್ಯರೇ ಮಾಹಿತಿ ನೀಡಿದ್ದಾರೆ. ನೊಬೆಲ್‌ ಸಮಿತಿ ಉಪಾಧ್ಯಕ್ಷ ಅಸ್ಲೆ ಟೋಜೆ ಅವರು, ‘ಮೋದಿ ಅವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅತ್ಯಂತ ಸೂಕ್ತವಾದ ವ್ಯಕ್ತಿ’ ಎಂದು  ಹೇಳಿದ್ದಾರೆ’ ಎಂದು ಹಲವು ಸುದ್ದಿವಾಹಿನಿಗಳು ವರದಿ ಪ್ರಸಾರ ಮಾಡಿದ್ದವು. ಆ ವರದಿಗಳ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು ಸುದ್ದಿ.

ಇದು ಸುಳ್ಳು ಸುದ್ದಿ ಎಂದು ಸಿಎನ್‌ಬಿಸಿ ಟಿ.ವಿ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ಇಂತಹ ಸುದ್ದಿ ಮೊದಲು ಪ್ರಸಾರವಾಗಿದ್ದು ಇದೇ ಮಾರ್ಚ್‌ 15ರಂದು. ‘ಈ ಎಲ್ಲಾ ವರದಿಗಳು ಸಂಪೂರ್ಣ ಸುಳ್ಳು’ ಎಂದು ಅಸ್ಲೆ ಟೋಜೆ ಅವರು ಮಾರ್ಚ್‌ 16ರಂದು ಸ್ಪಷ್ಟನೆ ನೀಡಿದ್ದರು. ಮಾರ್ಚ್‌ 15ರಂದು ಸುದ್ದಿ ವಾಹಿನಿಯೊಂದು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಅವರು, ‘ರಷ್ಯಾ–ಉಕ್ರೇನ್‌ ವಿಚಾರದಲ್ಲಿ ಎಲ್ಲಾ ದೇಶಗಳ ಜಾಗತಿಕ ಹೊಣೆಗಾರಿಕೆಗೆ ಹೆಗಲು ಕೊಡಲು ಭಾರತ ಸಿದ್ಧವಾಗಿರುವುದು ಶ್ಲಾಘನೀಯ’ ಎಂದು ಹೇಳಿದ್ದರು. ಅದನ್ನೇ ಮಾಧ್ಯಮಗಳು ಶಾಂತಿ ಪುರಸ್ಕಾರಕ್ಕೆ ಮೋದಿ ನಾಮನಿರ್ದೇಶನ ಎಂದು ಸುದ್ದಿ ಪ್ರಸಾರ ಮಾಡಿದ್ದವು. ಹೀಗಾಗಿ ಇದು ಒಂದು ತಿರುಚಲಾದ ಸುದ್ದಿ ಎಂದು ಸಿಎನ್‌ಬಿಸಿ ಟಿ.ವಿ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT