ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಜ್ಞರೊಂದಿಗೆ ಸಮಾಲೋಚನೆ ನಡೆಸದೆ ಲಾಕ್ಡೌನ್ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಕ್ಯಾರವಾನ್ ನಿಯತಕಾಲಿಕೆ ಮಾಡಿದ್ದ ವರದಿ ಸುಳ್ಳು ಎಂದು ಪಿಐಬಿಸ್ಪಷ್ಟ ಪಡಿಸಿದೆ.

‘ಲಾಕ್ಡೌನ್ ಮುಂದುವರಿಸುವ ನಿರ್ಧಾರ ಘೋಷಿಸುವ ಮುನ್ನ ಪ್ರಧಾನಿ ಮೋದಿ ಅವರು ಕೋವಿಡ್–19 ನಿಯಂತ್ರಣ ಸಂಬಂಧ ರಚಿಸಲಾಗಿರುವ 21 ತಜ್ಞರನ್ನೊಳಗೊಂಡ ಕಾರ್ಯಪಡೆಯನ್ನು ಒಮ್ಮೆಯೂ ಭೇಟಿಯಾಗಿರಲಿಲ್ಲ’ ಎಂದು ಏಪ್ರಿಲ್ 15 ರಂದು ವರದಿ ಮಾಡಿತ್ತು.

‘ನಿರ್ಧಾರ ಕೈಗೊಳ್ಳುವ ಮುನ್ನತಜ್ಞರೊಟ್ಟಿಗೆಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿಕೊಳ್ಳುವ ಉದ್ದೇಶದಿಂದ ಕಾರ್ಯಪಡೆಯನ್ನು ರಚಿಸಲಾಗಿದೆ ಎನ್ನುವಂತೆ ತೋರುತ್ತಿದೆ’ ಎಂದು ಕಾರ್ಯಪಡೆಯ ಹೆಸರು ಹೇಳಲು ಬಯಸದಸದಸ್ಯರೊಬ್ಬರು ಹೇಳಿರುವುದಾಗಿ ನಿಯತಕಾಲಿಕೆ ಉಲ್ಲೇಖಿಸಿತ್ತು.

ಇದನ್ನೂ ಓದಿ:ಇಂದಿನಿಂದ 21 ದಿನ ದಿಗ್ಬಂಧನ

ಈ ಬಗ್ಗೆ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿರುವ ಪಿಐಬಿ, ‘21 ವಿಜ್ಞಾನಿಗಳನ್ನೊಳಗೊಂಡ ಕೋವಿಡ್ ಕಾರ್ಯಪಡೆಯೊಂದಿಗೆ ಸಮಾಲೋಚನೆ ನಡೆಸದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಾಕ್ಡೌನ್ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಕ್ಯಾರವಾನ್ ನಿಯತಕಾಲಿಗೆ ವರದಿ ಮಾಡಿದೆ’

‘ವಾಸ್ತವವೇನೆಂದರೆ, ಕಾರ್ಯಪಡೆಯೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದೆ.

ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವಕೊರೊನಾವೈರಸ್ ನಿಯಂತ್ರಣದ ಸಲುವಾಗಿಮೋದಿ ಅವರು ಮಾರ್ಚ್ 24ರಂದು ದೇಶದಾದ್ಯಂತ 21 ದಿನಗಳ ಲಾಕ್ಡೌನ್ ಘೋಷಿಸಿದ್ದರು. ಅದರಂತೆ ಏಪ್ರಿಲ್ 14ಕ್ಕೆ ಲಾಕ್ಡೌನ್ ಮುಗಿಯಬೇಕಿತ್ತು. ಆದರೆ, ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇರುವುದರಿಂದ ಅದನ್ನು ಎರಡನೇ ಹಂತದಲ್ಲಿಮುಂದುವರಿಸಲು ಆದೇಶಿಸಲಾಗಿದೆ.ಮೇ 3ರ ವರೆಗೆಮುಂದುವರಿಯಲಿದೆ.

ಇದನ್ನೂ ಓದಿ:ಮೇ 3ರ ವರೆಗೂ ದೇಶದಾದ್ಯಂತ ಲಾಕ್ಡೌನ್ ಮುಂದುವರಿಕೆ: ಮೋದಿ

ಜಗತ್ತಿನಾದ್ಯಂತ ಸುಮಾರು 1.4 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿಪಡೆದಿರುವ ಕೋವಿಡ್–19 ಸೋಂಕುಸುಮಾರು 21 ಲಕ್ಷ ಜನರಲ್ಲಿ ಇರುವುದು ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.