ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ ಚೆಕ್‌: ಲಂಡನ್‌ ಸೇತುವೆ ಬಳಿ ಹನುಮಾನ್‌ ಚಾಲೀಸಾ ಪಠಣ?

Last Updated 9 ಮೇ 2022, 21:55 IST
ಅಕ್ಷರ ಗಾತ್ರ

ಲಂಡನ್‌ ಸೇತುವೆ ಬಳಿ ಭಾರತೀಯರ ಗುಂಪೊಂದು ಹನುಮಾನ್‌ ಚಾಲೀಸಾ ಪಠಣ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಹಾರಾಷ್ಟ್ರದಲ್ಲಿ ಈಗನಡೆಯುತ್ತಿರುವ ಧ್ವನಿವರ್ಧಕ ವಿವಾದದ ಜೊತೆ ಈ ವಿಡಿಯೊವನ್ನು ತಳಕುಹಾಕಲಾಗಿದೆ. ಲಂಡನ್‌ನಲ್ಲಿ ಹನುಮಾನ್‌ ಚಾಲೀಸಾ ಪಠಣ ಮಾಡಲಾಗಿದೆ. ಲಂಡನ್‌ ಮೇಯರ್‌ ಪಾಕಿಸ್ತಾನದ ಮೂಲದವರಾದರೂ ಹಿಂದೂಗಳು ಹುನುಮಾನ್‌ ಚಾಲೀಸಾ ಪಠಣ ಮಾಡುವುದನ್ನು ತಡೆದಿಲ್ಲ ಎಂಬ ವಿವರಣೆಯನ್ನು ವಿಡಿಯೊ ಜೊತೆ ನೀಡಲಾಗಿದೆ.

ಇದು ಇತ್ತೀಚಿನ ವಿಡಿಯೊವಲ್ಲ ಎಂದು ‘ದಿ ಕ್ವಿಂಟ್‌’ ವರದಿ ಮಾಡಿದೆ. ‘ಇಂಟರ್‌ನ್ಯಾಷನಲ್‌ ಸಿದ್ಧಾಶ್ರಮ ಶಕ್ತಿ ಸೆಂಟರ್‌’ ಎಂಬ ಧಾರ್ಮಿಕ ಸಂಸ್ಥೆ 2021ರ ಆಗಸ್ಟ್‌ 30ರಂದು ಲಂಡನ್‌ ಸೇತುವೆ ಬಳಿ ಕೃಷ್ಣ ಜನ್ಮಾಷ್ಟಮಿ ಆಚರಿಸಿತ್ತು. ಆ ವೇಳೆಭಾರತೀಯರು ಹನುಮಾನ್‌ ಚಾಲೀಸಾ ಪಠಣ ಮಾಡಿದ್ದರು ಮತ್ತು ಅಭಿಷೇಕವನ್ನು ನೆರವೇರಿಸಿದ್ದರು. ಕಾರ್ಯಕ್ರಮ ಆಯೋಜಿಸಿದ್ದ ಧಾರ್ಮಿಕ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿಈ ಕಾರ್ಯಕ್ರಮ ಕುರಿತ ಮಾಹಿತಿಯು ಪ್ರಕಟವಾಗಿದೆ ಎಂದು ದಿ ಕ್ವಿಂಟ್‌ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT