ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check | ಎಕ್ಸ್‌ರೇ ಅಂದರೆ ಜಾತಿ ಗಣತಿ ಎಂದು ರಾಹುಲ್‌ ಗಾಂಧಿ ಹೇಳಿಲ್ಲ

Published 26 ಫೆಬ್ರುವರಿ 2024, 0:30 IST
Last Updated 26 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ರಾಹುಲ್‌ ಗಾಂಧಿ ಅವರು ಭಾರತ ನ್ಯಾಯ ಯಾತ್ರೆಯಲ್ಲಿ ಮಾಡಿದ ಭಾಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ‘ತಿಂಗಳ ಜೋಕು, ಎಕ್ಸ್‌ರೇ ಅಂದರೆ ಜಾತಿ ಗಣತಿಯಂತೆ’ ಎಂದು ರಾಹುಲ್‌ ಭಾಷಣದ ವಿಡಿಯೊದೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ‘ಎಕ್ಸ್‌ರೇ ಅಂದರೆ ಜಾತಿ ಗಣತಿಯಂತೆ. ರಾಹುಲ್‌ ಗಾಂಧಿ ಅವರು ದಿನಾಲೂ ನಗುವುದಕ್ಕೆ ಒಂದೊಂದು ಕಾರಣ ಒದಗಿಸುತ್ತಿದ್ದಾರೆ’ ಎಂದೂ ಕೆಲವರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಫೆ. 19ರಂದು ರಾಹುಲ್‌ ಗಾಂಧಿ ಅವರು ಮಾಡಿದ ಭಾಷಣದ ತುಣುಕನ್ನು ತಿರುಚಿ, ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಅವರ ಭಾಷಣದ ಪೂರ್ಣ ಪಾಠವು ಕಾಂಗ್ರೆಸ್‌ನ ಯುಟ್ಯೂಬ್‌ ಚಾನೆಲ್‌ನಲ್ಲಿ ಲಭ್ಯವಿದೆ. ‘ನಾವು ಒಂದು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟು, ಪ್ರತಿಯೊಬ್ಬರ ಗಣತಿ ನಡೆಸಬೇಕಿದೆ. ದೇಶದಲ್ಲಿ ಎಷ್ಟು ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದ ಬಡವರು ಇದ್ದಾರೆ ಮತ್ತು ಅವರ ಬಳಿ ಎಷ್ಟು ಆಸ್ತಿ ಇದೆ? ದೇಶದಲ್ಲಿ ಎಷ್ಟು ಮಂದಿ ಹಿಂದುಳಿದ ವರ್ಗದ ಜನರ ಇದ್ದಾರೆ? ಅವರು ಯಾವ ಜಾತಿಯವರು? ಅವರ ಬಳಿ ಎಷ್ಟು ಹಣವಿದೆ? ಆದಿವಾಸಿಗಳ ಬಳಿ ಎಷ್ಟು ಆಸ್ತಿ ಇದೆ? ದಲಿತರ ಬಳಿ ಎಷ್ಟು ಹಣವಿದೆ? ಇದನ್ನು ತಿಳಿಸುವುದೇ ಜಾತಿ ಗಣತಿ. ಇಂದು ನನ್ನ ಭದ್ರತಾ ಸಿಬ್ಬಂದಿಯ ಕಾಲು ಕಾರಿನ ಅಡಿಗೆ ಸಿಲುಕಿತು. ಮೊದಲು ಎಕ್ಸ್‌ರೇ ಮಾಡಿಸು ಎಂದು ನಾವು ಆತನಿಗೆ ತಕ್ಷಣವೇ ಹೇಳಿದೆವು. ಆಗ ಕಾಲಿನಲ್ಲಿ ಏನಾಗಿದೆ ಎಂದು ತಿಳಿಯುತ್ತದೆ. ಹಾಗಾಗಿ, ಜಾತಿ ಗಣತಿ ಅಂದರೆ ಎಕ್ಸ್‌ರೇ ಇದ್ದಂತೆ’ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು ಎಂದು ದಿ ಕ್ವಿಂಟ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT