ಕೇರಳ: ಪೋಷಕರ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಜೀಪಿನಿಂದಮಗುವೊಂದು ಕೆಳಗೆ ಬಿದ್ದ ಘಟನೆ ಕೇರಳದಲ್ಲಿ ಭಾನುವಾರ ನಡೆದಿದೆ.

ಇಡುಕ್ಕಿ ಜಿಲ್ಲೆಯ ಮುನ್ನಾರ್ ಪ್ರದೇಶದಲ್ಲಿಈ ಘಟನೆ ನಡೆದಿದೆ. ಒಂದು ವರ್ಷದ ಹೆಣ್ಣು ಮಗು ಜೀಪಿನಿಂದ ಕೆಳಗೆ ಬಿದ್ದಿದೆ. ಬಿದ್ದ ತಕ್ಷಣವೇ ಮಗು ಅಳುತ್ತಾ ರಸ್ತೆಯಲ್ಲಿ ತೆವಳುತ್ತಾ ಬರುತ್ತಿತ್ತು. ಇದನ್ನು ನೋಡಿದ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇಎತ್ತಿಕೊಂಡರು. ನಂತರ ಅದಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಿದರು.

ಮುನ್ನಾರ್‌ನ ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಮಗು ಬೀಳುವುದು ಮತ್ತು ರಸ್ತೆ ಮೇಲೆ ತೆವಳುತ್ತಿರುವುದು ಸೆರೆಯಾಗಿದೆ. ಈ ಚೆಕ್ ಪೋಸ್ಟ್‌ನಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವಕಂಬಿಲಿಕಂಡಂ ಎಂಬಲ್ಲಿ ಮಗುವನ್ನು ನೋಡಿಕೊಂಡ ಪೋಷಕರು ಗಾಬರಿಯಾಗಿ ಮಗು ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದರು.

ಇತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಮಗುವನ್ನುಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿದರು. ಮಗುವಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುವುದನ್ನು ಹೊರತುಪಡಿಸಿದರೆಅಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದರು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಮಗುವನ್ನು ಕರೆತಂದು ಕಚೇರಿಯಲ್ಲಿಯೇ ಪೋಷಿಸಿದರು. ಅಲ್ಲದೆ,ಹತ್ತಿರದ ಪೊಲೀಸರಿಗೆ ವಿಷಯ ತಿಳಿಸಿದರು.

ಈ ವಿಷಯ ತಿಳಿಯತ್ತಿದ್ದಂತೆ ಪೊಲೀಸರು ಮಗುವನ್ನು ಕಳೆದುಕೊಂಡ ಪೋಷಕರಿಗೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಹೋಗಿ ಮಗುವನ್ನು ಪರಿಶೀಲಿಸುವಂತೆ ಹೇಳಿದ್ದಾರೆ. ಆಗಮಗುವು ತಮ್ಮದೇ ಎಂದು ಹೇಳಿದಾಗ ಸೋಮವಾರಪೊಲೀಸರ ಸಮ್ಮುಖದಲ್ಲಿ ಮಗುವನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಅದೃಷ್ಟವಶಾತ್ ಆ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.