ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಸ್ತ್ರಾಸ್ತ್ರ ಒಪ್ಪಿಸಿದ 1,615 ಬಂಡುಕೋರರು

ಫಾಲೋ ಮಾಡಿ
Comments

ಗುವಾಹಟಿ:ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್ ಬೋಡೊಲ್ಯಾಂಡ್‌ನ (ಎನ್‌ಡಿಎಫ್‌ಬಿ) ನಾಲ್ಕು ಬಣಗಳ 1,615 ಬಂಡುಕೋರರು ತಮ್ಮ ಶಸ್ತ್ರಾಸ್ತ್ರಗಳನ್ನು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಮತ್ತು ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗುರುವಾರ ಒಪ್ಪಿಸಿದ್ದಾರೆ. ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನದಂದು ಶಸ್ತ್ರತ್ಯಾಗ ಮಾಡಿದ್ದಾರೆ.

‘ಎನ್‌ಡಿಎಫ್‌ಬಿ’, ಬೋಡೊ ವಿದ್ಯಾರ್ಥಿ ಸಂಘಟನೆ(ಎಬಿಎಸ್‌ಯು) ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸೋಮವಾರ ಶಾಂತಿ ಒಪ್ಪಂದ ಏರ್ಪಟ್ಟ ಹಿನ್ನೆಲೆಯಲ್ಲಿ ಬಂಡುಕೋರರು, ತಮ್ಮ ಮುಖಂಡ ಬಿ.ಸಾವೊರೈಗ್ವಾರ ನೇತೃತ್ವದಲ್ಲಿ ಮುಖ್ಯವಾಹಿನಿಗೆ ಮರಳಿದರು.ಎ.ಕೆ.ರೈಫಲ್‌ಗಳನ್ನು ಒಳಗೊಂಡ ವಿವಿಧ ಮಾದರಿಯ 4,800 ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದರು.

‘ಅಸ್ಸಾಂನ ಅಭಿವೃದ್ಧಿಗಾಗಿ ಶಸ್ತ್ರಾಸ್ತ್ರ ತ್ಯಜಿಸಿ ‘ಎನ್‌ಡಿಎಫ್‌ಬಿ’ ಇತರರಿಗೆ ಮಾದರಿಯಾಗಿದೆ. ಇನ್ನೂ ಹಲವರು ಮುಖ್ಯವಾಹಿನಿಗೆ ಬಂದು ‘ಟೀಮ್‌ ಅಸ್ಸಾಂ’ನ ಭಾಗವಾಗಲಿದ್ದಾರೆ. ಗಾಂಧೀಜಿ ಅವರ ಸಂಸ್ಮರಣಾ ದಿನದಂದೇ ಅಹಿಂಸಾ ಹಾದಿಗೆ ಬೋಡೊ ನಾಯಕರು ಮರಳಿದ್ದಾರೆ. ಸರ್ಕಾರವುಸಮುದಾಯದ ಅಭಿವೃದ್ಧಿಗೆ ಶ್ರಮಿಸಲಿದೆ’ ಎಂದು ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT