ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜನ್‌ ವಿಚಾರಣೆ ಮಾಹಿತಿ ನೀಡಲು ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚನೆ

Last Updated 8 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ:1984ರ ಸಿಖ್‌ ವಿರೋಧಿ ಗಲಭೆಯಆರೋಪಿ ಸಜ್ಜನ್‌ ಕುಮಾರ್ ವಿಚಾರಣೆಯ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಸಿಬಿಐಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎಸ್‌.ಎ. ಬೊಬ್ಡೆ ಮತ್ತು ಎಸ್‌.ಎ ನಾಜೀರ್‌ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಿತು.

‘ಇದೊಂದು ಭಯಂಕರ ಕೃತ್ಯ. 1984ರಲ್ಲಿ ಸಂಸದರಾಗಿದ್ದ ಸಜ್ಜನ್‌ ಕುಮಾರ್‌, ಈ ಅವಧಿಯಲ್ಲಿ ನಡೆದ ಸಿಖ್‌ ಗಲಭೆಯ ಪ್ರಮುಖ ಸೂತ್ರಧಾರ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪೀಠಕ್ಕೆ ತಿಳಿಸಿದ್ದಾರೆ.

ಇದೇ ಗಲಭೆಗೆ ಸಂಬಂಧಿಸಿದಂತೆ, ಪಟಿಯಾಲಾ ಹೌಸ್‌ ಜಿಲ್ಲಾ ನ್ಯಾಯಾಲಯದಲ್ಲಿ ಸಜ್ಜನ್‌ ಕುಮಾರ್‌ ಮತ್ತೊಂದು ಪ್ರಕರಣ ಎದುರಿಸುತ್ತಿದ್ದಾರೆ. ಒಂದು ವೇಳೆ ಅವರಿಗೆ ಜಾಮೀನು ದೊರಕಿದರೆ ನ್ಯಾಯಾಲಯ ನಗೆಪಾಟಲಿಗೆ ಗುರಿಯಾಗಲಿದೆ ಎಂದು ಮೆಹ್ತಾ ತಿಳಿಸಿದ್ದಾರೆ.

1984ರ ಸಿಖ್‌ ವಿರೋಧಿ ದಂಗೆಯ ಆರೋಪಕ್ಕೆ ಸಂಬಂಧಿಸಿದಂತೆದೆಹಲಿ ಹೈಕೋರ್ಟ್‌ ಸಜ್ಜನ್‌ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.ಈ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಏಪ್ರಿಲ್‌ 15ರಂದು ನಡೆಯಲಿದೆ.

ಸಜ್ಜನ್‌ ಕುಮಾರ್‌ಗೆ ಸಾಕಷ್ಟು ರಾಜಕೀಯ ಪ್ರಭಾವವಿದೆ. ಅಲ್ಲದೆ ಪ್ರಭಾವ ಬೀರುವಷ್ಟು ಅಥವಾ ಭಯೋತ್ಪಾದನೆ ಪ್ರಚೋದಿಸುವ ಸಾಮರ್ಥ್ಯ ಇದೆ. ಹಾಗಾಗಿ ಸಜ್ಜನ್‌ ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಸಿಬಿಐ ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ಮನವಿ ಮಾಡಿತ್ತು.

ಶಿಕ್ಷೆಗೆ ಗುರಿಯಾಗುತ್ತಿದ್ದಂತೆಮಾಜಿ ಸಂಸದ ಸಜ್ಜನ್ ಕುಮಾರ್ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT