ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು | ಪೌಲ್ಟ್ರಿ ಫಾರಂಗೆ ಬೆಂಕಿ; 2 ಸಾವಿರ ಕೋಳಿಗಳ ಸಜೀವ ದಹನ

Published 8 ಜನವರಿ 2024, 10:59 IST
Last Updated 8 ಜನವರಿ 2024, 10:59 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ನಗರದ ಹೊರವಲಯದ ಕೋಳಿ ಫಾರಂ ಒಂದರಲ್ಲಿ ಬೆಂಕಿ ಅವಘಡದಿಂದಾಗಿ 2 ಸಾವಿರಕ್ಕೂ ಅಧಿಕ ಕೋಳಿಗಳು ಸಜೀವ ದಹನವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಅಖ್ನೂರ್‌ ತೆಹ್ಸಿಲ್‌ನ ಡೋಕ್‌ ಜಗೀರ್‌ ಪ್ರದೇಶದಲ್ಲಿ, ರಜ್‌ನೀತ್‌ ಸಿಂಗ್ ಎಂಬುವವರಿಗೆ ಸೇರಿದ ಫಾರಂನಲ್ಲಿ ಈ ಘಟನೆ ನಡೆದಿದೆ.

ಅಚಾನಕ್ಕಾಗಿ ಹೊತ್ತಿಕೊಂಡ ಬೆಂಕಿ, ಏಕಾಏಕಿ ಇಡೀ ಫಾರಂಗೆ ಆವರಿಸಿಕೊಂಡಿದೆ. ಪರಿಣಾಮ ಇಡೀ ಫಾರಂ ಹೊತ್ತಿ ಉರಿದಿದೆ. 2 ಸಾವಿರಕ್ಕೂ ಅಧಿಕ ಕೋಳಿಗಳು ಸತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಅವಘಡಕ್ಕೆ ಕಾರಣ ಏನೆಂಬುದರ ಪತ್ತೆಗೆ ತನಿಖೆ ಪ್ರಾರಂಭಿಸಲಾಗಿದೆ. ಘಟನೆಯಿಂದ ಆದ ನಷ್ಟದ ಪ್ರಮಾಣ ಬಗ್ಗೆ ಲೆಕ್ಕ ಹಾಕಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT