ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಜಫ್ಫರ್‌ನಗರ ಗಲಭೆ ಪ್ರಕರಣ: 7 ಮಂದಿಗೆ ಶಿಕ್ಷೆ, 1,117 ಆರೋಪಿಗಳ ಖುಲಾಸೆ

Published : 7 ಸೆಪ್ಟೆಂಬರ್ 2021, 8:45 IST
ಫಾಲೋ ಮಾಡಿ
Comments

ಮುಜಫ್ಫರ್‌ನಗರ(ಉತ್ತರ ಪ್ರದೇಶ): ಮುಜಫ್ಫರ್‌ನಗರದಲ್ಲಿ 2013ರಲ್ಲಿ ನಡೆದ ಗಲಭೆ ಸೇರಿದಂತೆ, ಎಂಟು ವರ್ಷ ಗಳಿಂದ ನಡೆದಿರುವ ದರೋಡೆ, ಕೊಲೆಯಂತಹ 97 ಪ್ರಕರಣಗಳಲ್ಲಿ 1,117 ಆರೋಪಿಗಳನ್ನು ಸಾಕ್ಷ್ಯಾಧಾರ ಕೊರತೆಯ ಕಾರಣ ಖುಲಾಸೆಗೊಳಿಸಲಾಗಿದೆ.

ಜಿಲ್ಲೆಯ ಕಾವಲ್‌ಹಳ್ಳಿಯಲ್ಲಿ ಸಚಿನ್ ಮತ್ತು ಗೌರವ್ ಎಂಬ ಇಬ್ಬರು ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಗೆ ಶಿಕ್ಷೆ ವಿಧಿಸಲಾಗಿದೆ.

2013ರ ಆಗಸ್ಟ್‌ 27ರಂದು ನಡೆದ ಶಹನವಾಜ್‌ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಗೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗಲಭೆ ಪ್ರಕರಣದ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿತ್ತು.

ಎಸ್‌ಐಟಿ ಅಧಿಕಾರಿಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 1480 ಮಂದಿ ವಿರುದ್ಧ 510 ಪ್ರಕರಣಗಳನ್ನು ದಾಖಲಿಸಲಾಗಿತ್ತು. 175 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT