ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿಸ್ತಾನ ಪರ ಗೋಡೆ ಬರಹ: ಮೂವರ ಬಂಧನ

Published 14 ಮೇ 2024, 12:18 IST
Last Updated 14 ಮೇ 2024, 12:18 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್‌ನ ಬಠಿಂಡಾ ಮತ್ತು ದೆಹಲಿಯಲ್ಲಿ ಖಾಲಿಸ್ತಾನ ಪರ ಘೋಷಣೆಗಳನ್ನು ಬರೆದ ಆರೋಪದ ಮೇರೆಗೆ ನಿಷೇಧಿತ ‘ಸಿಖ್ ಫಾರ್ ಜಸ್ಟೀಸ್’ ಸಂಘಟನೆಯ ಮೂವರನ್ನು ಪಂಜಾಬ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 

ಗುಪ್ತಚರ ದಳದ ಘಟಕ ಹಾಗೂ ಬಠಿಂಡಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದರು. 

ಏಪ್ರಿಲ್ 27ರಂದು ಬಠಿಂಡಾದ ನ್ಯಾಯಾಲಯ ಹಾಗೂ ಜಿಲ್ಲಾ ಆಡಳಿತದ ಆವರಣಗಳಲ್ಲಿರುವ ಗೋಡೆಗಳ ಮೇಲೆ ಖಾಲಿಸ್ತಾನ ಪರ ಘೋಷಣೆಗಳನ್ನು ಬರೆಯಲಾಗಿತ್ತು. ಅಲ್ಲದೆ,  ಮೇ 9ರಂದು ಇದೇ ರೀತಿಯ ಘೋಷಣೆಗಳು ದೆಹಲಿಯ ಝಂಡೆವಾಲಾನ್ ಮತ್ತು ಕರೋಲ್ ಬಾಗ್ ಮೆಟ್ರೊ ನಿಲ್ದಾಣಗಳಲ್ಲೂ ಕಂಡುಬಂದಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT