ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಸೇವಿಸದ ಶೇ 38ರಷ್ಟು ಭಾರತೀಯರಲ್ಲಿ ಫ್ಯಾಟಿ ಲಿವರ್ ಸಮಸ್ಯೆ! ಕಾರಣ ಏನು?

ಫ್ಯಾಟಿ ಲಿವರ್ ಸಮಸ್ಯೆಯಿಂದ ಪಿತ್ತಜನಕಾಂಗಕ್ಕೆ ಹಾನಿ
Published 28 ಜುಲೈ 2023, 16:17 IST
Last Updated 28 ಜುಲೈ 2023, 16:17 IST
ಅಕ್ಷರ ಗಾತ್ರ

ನವದೆಹಲಿ: ಅಲ್ಕೋಹಾಲ್‌ ಸೇವಿಸದ ಭಾರತೀಯರ ಪೈಕಿ ಶೇ 38ರಷ್ಟು ಜನರಲ್ಲಿ ಫ್ಯಾಟಿ ಲಿವರ್ (ಪಿತ್ತ ಜನಕಾಂಗದಲ್ಲಿ ಕೊಬ್ಬು ಸೇರಿಕೊಳ್ಳುವುದು) ಕಾಯಿಲೆ ಇದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌) ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ಈ ವಿದ್ಯಮಾನ ವಯಸ್ಕರಿಗೆ ಮಾತ್ರ ಸೀಮಿತವಾಗಿಲ್ಲ, ಶೇ 35ರಷ್ಟು ಮಕ್ಕಳಲ್ಲಿಯೂ ಈ ತೊಂದರೆ ಇದೆ ಎಂದೂ ಅಧ್ಯಯನ ಹೇಳಿದೆ. ‘ಜರ್ನಲ್‌ ಆಫ್ ಕ್ಲಿನಿಕಲ್ ಅಂಡ್ ಎಕ್ಸಪರಿಮೆಂಟಲ್ ಹೆಪಟಾಲಜಿ’ ಎಂಬ ನಿಯತಕಾಲಿಕದಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ಈ ಕಾಯಿಲೆಯನ್ನು ‘ನಾನ್‌ ಅಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್’ (ಎನ್‌ಎಎಫ್‌ಎಲ್‌ಡಿ) ಎಂದು ಕರೆಯಲಾಗುತ್ತದೆ. ಯಾವುದೇ ಲಕ್ಷಣಗಳು ಗೋಚರಿಸದ ಕಾರಣ ಆರಂಭಿಕ ಹಂತದಲ್ಲಿ ಈ ಕಾಯಿಲೆ ಪತ್ತೆಯಾಗುವುದಿಲ್ಲ. ಕ್ರಮೇಣ ಉಲ್ಬಣಿಸಿ, ರೋಗಿಗಳಲ್ಲಿ ತೀವ್ರ ತೊಂದರೆಗೆ ಕಾರಣವಾಗುತ್ತದೆ.

‘ಎನ್‌ಎಎಫ್‌ಎಲ್‌ಡಿ’ಗೆ ಕಾರಣಗಳು

* ಪಾಶ್ಚಾತ್ಯ ಆಹಾರಪದ್ಧತಿ ಅನುಕರಣೆ

* ಅತಿಯಾದ ಫಾಸ್ಟ್‌ಫುಡ್‌ಗಳ ಸೇವನೆ

* ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಕಡಿಮೆ ಮಾಡುವುದು

* ಅನಾರೋಗ್ಯಕರ ಮತ್ತು ವ್ಯಾಯಾಮ ಇರದ ಜೀವನಶೈಲಿ

* ಅಂಗಡಿಗಳಲ್ಲಿ ಸುಲಭವಾಗಿ ಸಿಗುವ (ಒವರ್‌ ದಿ ಕೌಂಟರ್‌) ಔಷಧಗಳ ಸೇವನೆಯೂ ಕೆಲವೊಮ್ಮೆ ಪಿತ್ತಜನಕಾಂಗಕ್ಕೆ ಹಾನಿ ಮಾಡುವುದು

 ಪರಿಹಾರಗಳೇನು

* ಆರೋಗ್ಯಕರ ಜೀವನ ಶೈಲಿ ಅಳವಡಿಕೆ

* ಬೊಜ್ಜು ಇರುವವರು ತೂಕ ಕಡಿಮೆ ಮಾಡಿಕೊಳ್ಳುವುದು

* ಜಂಕ್‌ ಮತ್ತು ಸಕ್ಕರೆ ಅಂಶ ಇರುವ ಆಹಾರಗಳ ಮಿತ ಸೇವನೆ

* ನಿಯಮಿತ ವ್ಯಾಯಾಮ

ಸದ್ಯ ‘ಫ್ಯಾಟಿ ಲಿವರ್’ ಕಾಯಿಲೆಗೆ ಅನುಮೋದಿತ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ ಅಳವಡಿಕೆಯಿಂದ ಈ ಕಾಯಿಲೆಯಿಂದ ಹೊರಬರಬಹುದು. ಸ್ವಯಂ ಆಗಿ ಔಷಧಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ.
ಡಾ.ಅನೂಪ್‌ ಸರಾಯ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಎಐಐಎಂಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT