ಅಹಮದಾಬಾದ್: ಗುಜರಾತ್‌ನಲ್ಲಿ ಇಂದು ಮಧ್ಯಾಹ್ನ ಲಘು ಭೂಕಂಪ ಸಂಭವಿಸಿರುವುದು ವರದಿಯಾಗಿದೆ.

ಇಂದು ಮಧ್ಯಾಹ್ನ 3:21ಕ್ಕೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್) ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

ಭೂಕಂಪದ ಕೇಂದ್ರಬಿಂದು ಗುಜರಾತ್‌ನ ರಾಜಕೋಟ್ನಿಂದ ವಾಯವ್ಯ ದಿಕ್ಕಿಗೆ (ನಾರ್ತ್ ವೆಸ್ಟ್) 270 ಕಿಮೀ ದೂರದ ಸ್ಥಳದಲ್ಲಿ ಇತ್ತು. ನೆಲದಿಂದ 10 ಕಿಮೀ ಆಳದಲ್ಲಿ ಗುರುತು ಮಾಡಲಾಗಿದೆ. ಭೂಕಂಪದಿಂದ ಯಾವುದೇ ಅನಾಹುತವಾದ ವರದಿ ಬಂದಿಲ್ಲ.

ಕಳೆದ ವಾರ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಅನುಭವ ಆಗಿತ್ತು ಎಂದು ಇನ್‌ಸ್ಟಿಟ್ಯೂಟ್ ಆಫ್ ಸಿಸ್ಮಾಲಾಜಿಕಲ್ ರಿಸರ್ಚ್‌ನ (ಐಎಸ್‌ಆರ್) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.