ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನಾವೊ| ಮತಾಂತರ ಉದ್ದೇಶದಿಂದ ಬಾಲಕನಿಗೆ ಬಲವಂತವಾಗಿ ಸುನ್ನತಿ: ವ್ಯಕ್ತಿ ಬಂಧನ

Last Updated 23 ಅಕ್ಟೋಬರ್ 2022, 3:31 IST
ಅಕ್ಷರ ಗಾತ್ರ

ಉನ್ನಾವೊ: ಮತಾಂತರಗೊಳಿಸುವ ಉದ್ದೇಶದಿಂದ ಐದು ವರ್ಷದ ಬಾಲಕನಿಗೆ ಮೊಹಮ್ಮದ್ ಅಸ್ಲಾಂ ಎಂಬಾತ ಉತ್ತರ ಪ್ರದೇಶದಲ್ಲಿ ಬಲವಂತವಾಗಿ ಸುನ್ನತಿ ಮಾಡಿಸಿರುವುದು ಬಹಿರಂಗವಾಗಿದೆ.

ಶನಿವಾರ ಉನ್ನಾವೊ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಮೌಲಾನಾ ಮೊಹಮ್ಮದ್ ಅಸ್ಲಾಂ ಎಂಬಾತ ಶುಕ್ರವಾರ ಸಂಜೆ ಬಾಲಕನಿಗೆ ಬಲವಂತವಾಗಿ ಸುನ್ನತಿ ಮಾಡಿಸಿದ್ದಾನೆ ಎಂದು ಗಂಗಾಘಾಟ್ ಪೊಲೀಸ್‌ ಠಾಣಾ ಮುಖ್ಯಸ್ಥ ಅಖಿಲೇಶ್ ಚಂದ್ರ ಪಾಂಡೆ ತಿಳಿಸಿದ್ದಾರೆ.

‘ಮನೆಗೆ ಬಂದ ಬಾಲಕ ನಡೆದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾನೆ. ಈ ಘಟನೆ ಅಶಾಂತಿಗೂ ಕಾರಣವಾಯಿತು. ನಂತರ, ಪೋಷಕರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ಪಾಂಡೆ ಹೇಳಿದರು.

ಅಕ್ರಮ ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದರ ಜತೆಗೆ, ಅಪಾಯಕಾರಿ ಆಯುಧಗಳಿಂದ ಗಂಭೀರವಾಗಿ ಗಾಯಗೊಳಿಸಿದ ಆರೋಪವನ್ನು ಹೊರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯನ್ನುವಿಚಾರಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT