ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐದು ವರ್ಷಗಳಲ್ಲಿ 772 ರೈಲು ಸೇವೆಗಳು: ಸಚಿವ ಅಶ್ವಿನಿ ವೈಷ್ಣವ್‌

Published : 4 ಆಗಸ್ಟ್ 2024, 15:36 IST
Last Updated : 4 ಆಗಸ್ಟ್ 2024, 15:36 IST
ಫಾಲೋ ಮಾಡಿ
Comments

ನವದೆಹಲಿ: ‘100 ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲುಗಳನ್ನು ಒಳಗೊಂಡಂತೆ ಒಟ್ಟು 772 ರೈಲು ಸೇವೆಗಳನ್ನು ಕಳೆದ ಐದು ವರ್ಷಗಳಲ್ಲಿ ಭಾರತೀಯ ರೈಲ್ವೆ ಆರಂಭಿಸಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

‘ಹೊಸ ಹೊಸ ರೈಲು ಸೇವೆಗಳನ್ನು ಆರಂಭಿಸುವುದು ಇಲಾಖೆಗೆ ಹೊಸತೇನಲ್ಲ. ಆದರೆ, ಇದರ ಜೊತೆಯಲ್ಲಿಯೇ ರೈಲು ಸಂಚಾರಕ್ಕೆ ಸಂಬಂಧಿಸಿದ ಕಾರ್ಯಗಳು, ಇಲಾಖೆಯ ಕಾರ್ಯವೈಖರಿಯಲ್ಲಿ ಇನ್ನಷ್ಟು ದಕ್ಷತೆ ಸೇರಿದಂತೆ ಹಲವು ವಿಭಾಗಗಳಲ್ಲಿಯೂ ಇಲಾಖೆಯು ಜನರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿದೆ’ ಎಂದಿದ್ದಾರೆ. 

‘ಜನರ ಅನುಕೂಲಕ್ಕಾಗಿ ಎಕ್ಸ್‌ಪ್ರೆಸ್‌ ರೈಲುಗಳು, ಸೂಪರ್‌ಫಾಸ್ಟ್‌ ರೈಲುಗಳು, ಪ್ಯಾಸೆಂಜರ್‌, ಉಪನಗರ ರೈಲು ಸೇವೆಗಳನ್ನು ಇಲಾಖೆ ನೀಡುತ್ತಿದೆ. ಜೊತೆಗೆ, ಇದೇ ವರ್ಷದ ಜುಲೈ 29ರವರೆಗೆ, 102 ವಂದೇ ಭಾರತ ಎಕ್ಸ್‌ಪ್ರೆಸ್‌ಗಳ ಸಂಚಾರ ದೇಶದಾದ್ಯಂತ ನಡೆಯಿತು. ಗರಿಷ್ಠ 760 ಕಿ.ಮೀ. ದೂರದವರೆಗೆ ಈ ರೈಲು ಸೇವೆ ಒದಗಿಸುತ್ತಿದೆ’ ಎಂದು ಸಚಿವ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT