ಇಂಫಾಲ: ಇತ್ತೀಚೆಗೆ ಬಿಹಾರ ಮೂಲದ ಇಬ್ಬರು ವಲಸೆ ಕಾರ್ಮಿಕರ ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಉಗ್ರಗಾಮಿ ಸಂಘಟನೆ ಕಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ಪೀಪಲ್ಸ್ ವಾರ್ ಗ್ರೂಪ್) ಎಂಟು ಸದಸ್ಯರನ್ನು ಮಣಿಪುರದ ಕಾಕ್ಚಿಂಗ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾದವರನ್ನು ಬಂಧಿಸಲು ಡಿಸೆಂಬರ್ 14ರಂದು ಮಣಿಪುರದಾದ್ಯಂತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಲಾಯಿತು. ಈ ವೇಳೆ ನಿಷೇಧಿತ ಸಂಘಟನೆಯ ಸಕ್ರಿಯ ಸದಸ್ಯನನ್ನು ಕಾಕ್ಚಿಂಗ್ ಲಾಮ್ಖೈ ಪ್ರದೇಶದಿಂದ ಬಂಧಿಸಲಾಯಿತು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಆರೋಪಿ ನೀಡಿದ ಮಾಹಿತಿ ಮೇರೆಗೆ ಕಾಕ್ಚಿಂಗ್ ಮಮಾಂಗ್ ಚಿಂಗ್ ಲೈಫಾಮ್ ಲೋಕನುಂಗ್ ಪ್ರದೇಶದಲ್ಲಿ ನೆಲೆಗೊಂಡಿರುವ ಶಿಬಿರದ ಮೇಲೆ ಪೊಲೀಸರ ತಂಡ ದಾಳಿ ಮಾಡಿತ್ತು. ಅಲ್ಲಿ ಕೆಸಿಪಿಯ (ಪಿಡಬ್ಲ್ಯುಜಿ) ಇತರ ಏಳು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಹಾಗೂ 10 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
.ಮಣಿಪುರ ಬಿಕ್ಕಟ್ಟು–ಶಾಶ್ವತ ಪರಿಹಾರಕ್ಕೆ ಸಮಯ ಬೇಕು: ಬಿರೇನ್ ಸಿಂಗ್.ಮಣಿಪುರ: ಶಸ್ರ್ರಾಸ್ತ್ರ, ಮದ್ದುಗುಂಡು ಜಪ್ತಿ.ಜನಾಂಗೀಯ ಹಿಂಸಾಚಾರ: ವಿವರ ನೀಡುವಂತೆ ಮಣಿಪುರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.