ಭೋಪಾಲ್: ಬಿಜೆಪಿ ಸರ್ಕಾರವು ಕಳೆದ 11 ವರ್ಷಗಳಲ್ಲಿ ಕೇವಲ 2,400 ಒಳನುಸುಳುಕೋರರನ್ನು ಪತ್ತೆಮಾಡಿದೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ 88 ಸಾವಿರ ಒಳನುಸುಳುಕೋರರನ್ನು ದೇಶದಿಂದ ಹೊರಗಟ್ಟಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಶನಿವಾರ ತಿಳಿಸಿದ್ದಾರೆ.

ಚುನಾವಣಾ ಆಯೋಗದ ಎಸ್ಐಆರ್ ಕುರಿತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ದಿಗ್ವಿಜಯ ಸಿಂಗ್ ಅವರು ಕಿಡಿಕಾರಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಒಳನುಸುಳುಕೋರರ ಕುರಿತು ಮಾತನಾಡುತ್ತಿದೆ. ಆದರೆ ನಿಜವಾದ ಸಂಗತಿ ಎಂದರೆ, 2004 ರಿಂದ 2014ರ ಅವಧಿಯಲ್ಲಿ ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ದೇಶದ ನಾಗರಿಕರಲ್ಲದ 88 ಸಾವಿರ ಜನರನ್ನು ಪತ್ತೆಮಾಡಲಾಗಿತ್ತು. ಕಳೆದ 11 ವರ್ಷಗಳಲ್ಲಿ ಕೇವಲ 2,400 ಒಳನುಸುಳುಕೋರರನ್ನು ಪತ್ತೆಮಾಡಲಾಗಿದೆ. ನಾವು ಪತ್ತೆಮಾಡಿದ ಶೇ 3ರಷ್ಟು ಒಳನುಸುಳುಕೋರರನ್ನು ಕೂಡ ಬಿಜೆಪಿಯು ಪತ್ತೆಮಾಡಿಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ನಾಗರಿಕನು ಕೂಡ ಮತದಾನ ಮಾಡುವಂತೆ ಮಾಡುವುದು ಚುನಾವಣಾ ಆಯೋಗದ ಕರ್ತವ್ಯ. 2003ರಲ್ಲಿ ಜನ್ಮ ಪ್ರಮಾಣಪತ್ರ, ರೇಷನ್ ಕಾರ್ಡ್ ಹಾಗೂ ಶಾಲಾ ದಾಖಲಾತಿಗಳು ಪೌರತ್ವವನ್ನು ಸಾಬೀತು ಮಾಡಲು ಸಾಕಾಗಿದ್ದವು. ಆದರೆ ಈಗ ಪೌರತ್ವ ಪ್ರಮಾಣಪತ್ರ ಕೇಳುತ್ತಿದ್ದಾರೆ. ದೇಶದ ಶೇ 99 ರಷ್ಟು ಜನರ ಬಳಿ ಅದು ಇಲ್ಲ. ಎಸ್ಐಆರ್ ವೇಳೆ ನಾಗರಿಕರು ಪೌರತ್ವದ ದಾಖಲೆಗಳನ್ನು ಸಾಬೀತು ಪಡಿಸುವಲ್ಲಿ ವಿಫಲರಾದರೆ, ಮುಂದೇನಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಯಾದ ತಕ್ಷಣವೇ ಮತದಾರರ ತಿದ್ದುಪಡಿಯನ್ನು ನಿಲ್ಲಿಸಬೇಕು. ಹಾಗಾದರೆ, ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಕಳೆದ ವಾರದಿಂದ ಎಸ್ಐಆರ್ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.